ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnatak Budget 2021 | ಬಜೆಟ್‌ ಗಾತ್ರ ₹25 ಸಾವಿರ ಕೋಟಿ ಇಳಿಕೆ: ಬೊಮ್ಮಾಯಿ

Last Updated 5 ಮಾರ್ಚ್ 2021, 10:38 IST
ಅಕ್ಷರ ಗಾತ್ರ

ಹಾವೇರಿ: ‘ಕೋವಿಡ್‌ನಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಆದಾಯ ಕಡಿಮೆಯಾಗಿದೆ. ಜಿಎಸ್‌ಟಿಯಿಂದಲೂ ನಿರೀಕ್ಷಿತ ಆದಾಯ ಸಿಕ್ಕಿಲ್ಲ. ಕನಿಷ್ಠ ₹50 ಸಾವಿರ ಕೋಟಿ ಆದಾಯ ಕೊರತೆಯಾಗಿದೆ. ಹೀಗಾಗಿ ಮುಂಬರುವ ರಾಜ್ಯ ಬಜೆಟ್‌ ಗಾತ್ರ ₹25 ಸಾವಿರ ಕೋಟಿ ಕಡಿಮೆಯಾಗಲಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರಾಜ್ಯ ಬಜೆಟ್‌ ಮಂಡಿಸುವುದು ಈ ಬಾರಿ ಸವಾಲಿನ ಕೆಲಸವಾಗಿದೆ. ಜನಸಾಮಾನ್ಯರಿಗೆ ಅಗತ್ಯವಾದ ಪ್ರಮುಖ ಯೋಜನೆಗಳನ್ನು ಕೈಬಿಡದೆ ಮುಂದುವರಿಸಬೇಕಿದೆ. ಸಾಧ್ಯತೆಗಳನ್ನು ನೋಡಿಕೊಂಡು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿಯವರು ಬಜೆಟ್‌ ಲೆಕ್ಕಾಚಾರ ಮಾಡುತ್ತಿದ್ದಾರೆ’ ಎಂದರು.

‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈಗಾಗಲೇ ನಿರ್ಧಾರವಾಗಿರುವಂತೆ ಫೆ.26ರಿಂದ ಫೆ.28ರವರೆಗೆ ನಡೆಯಲಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳೊಂದಿಗೆ ಶೀಘ್ರ ಸಭೆ ನಡೆಸಿ, ಸಮ್ಮೇಳನದ ಅಂತಿಮ ಸ್ವರೂಪವನ್ನು ನಿರ್ಧರಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT