ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022–23ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತಾರಾಮನ್

Last Updated 31 ಜನವರಿ 2023, 9:09 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2022–23ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ.

ಮುಖ್ಯಾಂಶಗಳು ಇಂತಿವೆ.

* ಈ ವರ್ಷದ ಶೇಕಡ 7ರಷ್ಟು ಬೆಳವಣಿಗೆ ದರಕ್ಕೆ ಹೋಲಿಸಿದರೆ, ಭಾರತದ ಆರ್ಥಿಕತೆಯು 2023–24ರ ಆರ್ಥಿಕ ವರ್ಷದಲ್ಲಿ ಶೇ. 6.5ರಷ್ಟು ಬೆಳವಣಿಗೆಯಾಗಲಿದೆ. 2021–22ರಲ್ಲಿ ಈ ದರ ಶೇಕಡ 8.7ರಷ್ಟಿತ್ತು. ಭಾರತವು ಈಗಲೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.

* ಭಾರತವು ಪಿಪಿಪಿ(ಖರೀದಿ ಸಾಮರ್ಥ್ಯದ ಅನುರೂಪತೆ) ನಿಯಮಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ, ವಿನಿಮಯ ದರದ ವಿಷಯದಲ್ಲಿ ಐದನೇ ದೊಡ್ಡ ಆರ್ಥಿಕತೆಯಾಗಿದೆ.

* ಕೋವಿಡ್ ಸಂಕಷ್ಟ ಮತ್ತು ಯೂರೋಪಿನ ಬಿಕ್ಕಟ್ಟಿನಿಂದಾಗಿ ಕುಸಿದಿದ್ದ ಆರ್ಥಿಕತೆಯು ಬಹುತೇಕ ಮತ್ತೆ ಹಳಿಗೆ ಮರಳಿದೆ.

* ಜಾಗತಿಕ ಆರ್ಥಿಕ, ರಾಜಕೀಯ ಬೆಳವಣಿಗೆಗಳನ್ನು ಅವಲಂಬಿಸಿ ಮುಂದಿನ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇಕಡ 6-6.8 ವ್ಯಾಪ್ತಿಯಲ್ಲಿರುತ್ತದೆ.

* ಕೋವಿಡ್ ನಂತರದ ಭಾರತದ ಚೇತರಿಕೆಯು ಅತ್ಯಂತ ವೇಗವಾಗಿದ್ದು, ಮುಂದಿನ ಆರ್ಥಿಕ ಬೆಳವಣಿಗೆಯು ದೇಶೀಯ ಬೇಡಿಕೆಯ ಮೇಲೆ ಆಧಾರಿತವಾಗಿದೆ.

* ಆರ್‌ಬಿಐ ಈ ಹಣಕಾಸು ವರ್ಷದಲ್ಲಿ ಶೇಕಡ 6.8ರಷ್ಟು ಹಣದುಬ್ಬರವನ್ನು ಅಂದಾಜು ಮಾಡಿದೆ.

* ಅಮೆರಿಕದ ಫೆಡರಲ್ ಬ್ಯಾಂಕ್ ಮತ್ತಷ್ಟು ಬಡ್ಡಿ ದರ ಹೆಚ್ಚಳದ ಸಾಧ್ಯತೆ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತದ ಸವಾಲು ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT