ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಲೆಕ್ಕಿಗರಿಗೆ ಸಿಹಿ ಸುದ್ದಿ: ಏಪ್ರಿಲ್‌ನಿಂದ ಸರಳವಾಗಲಿದೆ GST ನಮೂನೆ

Last Updated 1 ಫೆಬ್ರುವರಿ 2020, 6:51 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ಬಗ್ಗೆ ಸಾಕಷ್ಟು ಗೊಂದಲಗಳಿಂದ ರೋಸಿ ಹೋದ ಚಾರ್ಟರ್ಡ್ ಅಕೌಂಟೆಂಟ್ಸ್ ಸೇರಿದಂತೆ ವಾಣಿಜ್ಯ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಸಮಾಧಾನಕರ ಸುದ್ದಿ. ಏಪ್ರಿಲ್ 2020ರಿಂದ ಹೊಸ ಸರಳೀಕೃತ ಜಿಎಸ್‌ಟಿ ರಿಟರ್ನ್ ನಮೂನೆಯನ್ನು ಪರಿಚಯಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತಮ್ಮ ಎರಡನೇ ಬಜೆಟ್ ಮಂಡಿಸುತ್ತಾ ಸಚಿವೆ ನಿರ್ಮಲಾ, ಜಿಎಸ್‌ಟಿಯಿಂದಾಗಿ ಇನ್‌ಸ್ಪೆಕ್ಟರ್ ರಾಜ್‌ಗೆ ಹೊಡೆತ ಬಿದ್ದಿದ್ದು, ಗ್ರಾಹಕರಿಗೆ 1 ಲಕ್ಷ ಕೋಟಿ ಲಾಭವಾಗಿದೆ ಮತ್ತು ಸಾರಿಗೆ ವಲಯದ ಚೇತರಿಕೆಗೂ ಕಾರಣವಾಗಿದೆ ಎಂದರು.

ಜಿಎಸ್‌ಟಿ ಎಂಬ ಸಮಗ್ರ ತೆರಿಗೆ ಪದ್ಧತಿಯಿಂದಾಗಿ ಪ್ರತೀ ಕುಟುಂಬಕ್ಕೆ ಸರಾಸರಿ ಶೇ.4 ಉಳಿತಾಯವಾಗಿದೆ ಎಂದ ಹಣಕಾಸು ಸಚಿವರು, 2020-21ರ ಬಜೆಟ್ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪೂರಕವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT