ಮಂಗಳವಾರ, ಮೇ 17, 2022
25 °C

Union Budget 2021| ಬಜೆಟ್‌ನಲ್ಲಿ ಏರಿದ್ದೇನು? ಇಳಿದಿದ್ದೇನು? ಇಲ್ಲಿದೆ ಪಟ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೇಂದ್ರ ಬಜೆಟ್‌ನಲ್ಲಿ ಆಮದು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳ ನಿರ್ಧಾರ ಪ್ರಕಟಿಸಲಾಗಿದೆ. ಹೀಗಾಗಿ ದಿನ ಬಳಕೆಯ ವಸ್ತುಗಳಾದ ರೆಫ್ರಿಜರೇಟರ್‌ಗಳು, ಹವಾನಿಯಂತ್ರಕಗಳು, ಎಲ್‌ಇಡಿ ದೀಪಗಳು ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಸ್ತುಗಳು ದುಬಾರಿಯಾಗಲಿವೆ.

ಆದರೆ, ಚಿನ್ನ ಬೆಳ್ಳಿಯ ಆಮದಿನ ಮೇಲಿನ ಕಸ್ಟಮ್‌ ಸುಂಕ ಬದಲಾವಣೆಯಿಂದಾಗಿ ಅವುಗಳು ಅಗ್ಗವಾಗುವ ಸಾಧ್ಯತೆಗಳಿವೆ.

ಏರಿದ್ದು...

- ರೆಫ್ರಿಜರೇಟರ್‌ಗಳು ಮತ್ತು ಏರ್‌ಕಂಡೀಷನರ್‌ಗಳ ಕಂಪ್ರೇಸರ್‌ಗಳು
-ಎಲ್‌ಇಡಿ ದೀಪಗಳು, ಸರ್ಕೀಟ್‌ ಬೋರ್ಡ್‌ಗಳು
- ರೇಷ್ಮೆ ಮತ್ತು ಹತ್ತಿ
- ಸೋಲಾರ್‌ ಇನ್ವರ್ಟರ್‌ಗಳು ಮತ್ತು ದೀಪಗಳು
- ಆಟೊಮೊಬೈಲ್‌ ಬಿಡಿಭಾಗಗಳು: ಗಾಜುಗಳು, ಸ್ಕ್ರೀನ್‌ ವೈಪರ್‌ಗಳು, ಸಿಗ್ನಲ್‌ ಪರಿಕರಗಳು
- ಮೊಬೈಲ್‌ ಫೋನ್‌ಗಳ ಬಿಡಿಭಾಗಗಳು: ಕ್ಯಾಮೆರಾ ಮಾಡ್ಯೂಲ್‌ಗಳು, ಕನೆಕ್ಟರ್‌ಗಳು, ಬ್ಯಾಕ್‌ ಕವರ್‌ಗಳು, ಸೈಡ್‌ ಕೀಗಳು
- ಮೊಬೈಲ್‌ ಫೋನ್‌ ಚಾರ್ಜರ್‌ ಪರಿಕರಗಳು
- ಲೀಥಿಯಮ್‌ ಬ್ಯಾಟರಿಯ ಅಂತರಿಕ ವಸ್ತುಗಳು ಅಥವಾ ಕಚ್ಚಾ ಪದಾರ್ಥಗಳು
- ಇಂಕ್‌ ಕಾಟ್ರಿಡ್ಜ್‌ಗಳು, ಇಂಕ್‌ ಸ್ಪ್ರೇ ನಾಸೆಲ್‌ಗಳು
- ಚರ್ಮದ ಪರಿಕರಗಳು
- ನೈಲಾನ್‌ ಫೈಬರ್‌
- ಪ್ಲಾಸ್ಟಿಕ್‌ ಬಿಲ್ಡರ್‌ ಪರಿಕರಗಳು
-ಸಿಂಥೆಟಿಕ್‌ ಕಲ್ಲುಗಳು

ಇಳಿಕೆಯಾಗಿದ್ದು... 

- ಚಿನ್ನ, ಬೆಳ್ಳಿ
- ಪ್ಲಾಟಿನಮ್‌, ಪಲ್ಲಾಡಿಯಮ್ ಸೇರಿ ಇತರೆ ಅಮೂಲ್ಯ ಲೋಹಗಳು
- ಅಂತರರಾಷ್ಟ್ರೀಯ ಸಂಘ ಸಂಸ್ಥೆಯ ಮತ್ತು ರಾಜತಾಂತ್ರಿಕ ಮಾರ್ಗದ ವೈದ್ಯಕೀಯ ಪರಿಕರಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು