ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget: 59 ನಿಮಿಷಗಳಲ್ಲೇ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್

Published 1 ಫೆಬ್ರುವರಿ 2024, 7:26 IST
Last Updated 1 ಫೆಬ್ರುವರಿ 2024, 7:26 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ತಮ್ಮ ಆರನೇ ಬಜೆಟ್‌ ಮಂಡಿಸಿದ್ದು, ಒಟ್ಟು 59 ನಿಮಿಷ ಓದಿದರು. ಇದು, ಅವರ ಅತಿ ಕಡಿಮೆ ಅವಧಿಯ ಬಜೆಟ್‌ ಭಾಷಣ.

ಈ ಹಿಂದೆ 2020ರಲ್ಲಿ ಅವರು ಗರಿಷ್ಠ ಅವಧಿ ಅಂದರೆ 2 ಗಂಟೆ 40 ನಿಮಿಷ ಬಜೆಟ್‌ ಓದಿದ್ದರು. 2019ರಲ್ಲಿ 2 ಗಂಟೆ 17 ನಿಮಿಷ, 2021ರಲ್ಲಿ 1 ಗಂಟೆ 50 ನಿಮಿಷ, 2022ರಲ್ಲಿ 92 ನಿಮಿಷ, 2023ರಲ್ಲಿ 87 ನಿಮಿಷ ಬಜೆಟ್ ಓದಿದ್ದರು.

ಆಡಳಿತ ಪಕ್ಷದ ಸದಸ್ಯರು ಗುರುವಾರ ಭಾಷಣದ ನಡುನಡುವೆ ಮೇಜುಕುಟ್ಟಿ ಹರ್ಷ ವ್ಯಕ್ತಪಡಿಸಿದರು. ‘ನಮ್ಮ ಸರ್ಕಾರ’ ಜುಲೈನಲ್ಲಿ ಪೂರ್ಣ ಬಜೆಟ್‌ ಮಂಡಿಸಲಿದೆ ಎಂದಾಗ ಸದಸ್ಯರಿಂದ ಕರತಾಡನದ ಮೆಚ್ಚುಗೆ ದೊರೆಯಿತು.

ಪ್ರತಿಪಕ್ಷಗಳ ಸದಸ್ಯರೂ ಹೆಚ್ಚು ಕುತೂಹಲದಿಂದ ಭಾಷಣ ಆಲಿಸಿದ್ದು ಗಮನಾರ್ಹವಾಗಿತ್ತು. ಆದರೆ, ಸಚಿವೆ ‘ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂಬ ಹೇಳಿದ ಸಂದರ್ಭಗಳಲ್ಲಿ ಅಲ್ಲಲ್ಲಿ ಆಕ್ಷೇಪಗಳು ಕೇಳಿಬಂದವು. 

ಪ್ರಧಾನಿ ನರೇಂದ್ರ ಮೋದಿ ಅವರು ಸದನವನ್ನು ಪ್ರವೇಶಿಸಿದಾಗ ಬಿಜೆಪಿ ಸದಸ್ಯರು ‘ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್‌, ಜೈ ಸಿಯಾರಾಂ ಘೋಷಣೆಗಳನ್ನು ಕೂಗಿದರು.

'ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ'

ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರವು ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ ಎಂದು ನಿರ್ಮಲಾ ಅವರು ಬಜೆಟ್‌ ಮಂಡನೆ ವೇಳೆ ಹೇಳಿದ್ದಾರೆ.

ದೇಶದ ಆರ್ಥಿಕತೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ 10 ವರ್ಷಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ದೇಶದ ಜನರ ಆದಾಯವು ಶೇ 50ರಷ್ಟು ಏರಿಕೆಯಾಗಿದೆ ಎಂದಿರುವ ಅವರು, ತೆರಿಗೆ ಪಾವತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿಯೂ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT