ಗುರುವಾರ , ಏಪ್ರಿಲ್ 9, 2020
19 °C

ಈ ಬಾರಿ ರೈತಪರ ಬಜೆಟ್: ಸುಳಿವು ಬಿಟ್ಟುಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

B S Yediyurappa

ಬೆಂಗಳೂರು: ‘ಸಕಾಲಕ್ಕೆ ಮಳೆಯಾಗಲಿ, ಉತ್ತಮ ಬೆಳೆ ಬರಲಿ, ರೈತರು ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ರೂಪುಗೊಳ್ಳಲಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾರ್ಥನೆ ಸಲ್ಲಿಸಿದರು.

ಬೆಂಗಳೂರು ಮಲ್ಲೇಶ್ವರಂನ ಗಣಪತಿ ದೇಗುಲದಲ್ಲಿ ಬಜೆಟ್‌ ಇದ್ದ ಬ್ರೀಫ್‌ಕೇಸ್‌ಗೆ ಪೂಜೆ ಮಾಡಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಉತ್ತಮ ಬಜೆಟ್ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.

‘ರೈತಪರವಾಗ ಬಜೆಟ್‌ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರತಿಪಕ್ಷಗಳು ಸಹಕಾರ ಕೊಡಬೇಕು. ಬಜೆಟ್‌ ಮೇಲಿನ ಚರ್ಚೆಗೆ ಒಂದಿಡೀ ತಿಂಗಳು ಅವಕಾಶವಿದೆ. ಕೃಷಿಯ ಅಗತ್ಯಗಳನ್ನು ಪೂರೈಸಲು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ’ ಎಂದು ಬಜೆಟ್‌ನ ಇಣುಕು ನೋಟ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು