ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2023: ಯಾವ ವಲಯಕ್ಕೆ ಎಷ್ಟು ಅನುದಾನ?

Last Updated 17 ಫೆಬ್ರವರಿ 2023, 11:16 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಅಲ್ಲದೆ ವಿವಿಧ ವಲಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.

ಆಯವ್ಯಯ 2023-24ರ ಮುಖ್ಯಾಂಶಗಳು:

ಆಯವ್ಯಯ ಪಕ್ಷಿನೋಟ:
*ಆಯವ್ಯಯ ಗಾತ್ರ (ಸಂಚಿತ ನಿಧಿ)- ₹3,09,182 ಕೋಟಿ
*ಒಟ್ಟು ಸ್ವೀಕೃತಿ- ₹3,03,910 ಕೋಟಿ
*ರಾಜಸ್ವ ಸ್ವೀಕೃತಿ ₹2,25,910 ಕೋಟಿ
*ಸಾರ್ವಜನಿಕ ಋಣ- ₹77,750 ಕೋಟಿ ಸೇರಿದಂತೆ ಬಂಡವಾಳ ಸ್ವೀಕೃತಿ ₹78,000 ಕೋಟಿ

ಒಟ್ಟು ವೆಚ್ಚ- ₹3,03,910 ಕೋಟಿ
*ರಾಜಸ್ವ ವೆಚ್ಚ- ₹2,25,507 ಕೋಟಿ
*ಬಂಡವಾಳ ವೆಚ್ಚ- ₹61,234 ಕೋಟಿ ಹಾಗೂ ಸಾಲ ಮರುಪಾವತಿ ₹22,441 ಕೋಟಿ.

ವಿವಿಧ ವಲಯಗಳಿಗೆ ಒದಗಿಸಲಾದ ಅನುದಾನ:

1. ಕೃಷಿ ಮತ್ತು ಪೂರಕ ಚಟುವಟಿಕೆಗಳು- ₹39,031 ಕೋಟಿ
2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- ₹80,318 ಕೋಟಿ
3. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ- ₹61,488 ಕೋಟಿ
4. ಬೆಂಗಳೂರು ಸಮಗ್ರ ಅಭಿವೃದ್ಧಿ- ₹9,698 ಕೋಟಿ
5. ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ- ₹3,458 ಕೋಟಿ
6. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ- ₹68,585 ಕೋಟಿ

*ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಮಹಿಳಾ ಉದ್ದೇಶಿತ ಆಯವ್ಯಯದಲ್ಲಿ ಒದಗಿಸಿದ ಅನುದಾನ ₹46,278 ಕೋಟಿ
*ಮಕ್ಕಳ ಅಭ್ಯುದಯಕ್ಕೆ ಆಯವ್ಯಯದಲ್ಲಿ ಒದಗಿಸಿದ ಅನುದಾನ ₹47,256 ಕೋಟಿ

*ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಯಡಿ ಆಯವ್ಯಯದಲ್ಲಿ ಒದಗಿಸಿದ ಅನುದಾನ ₹30,215 ಕೋಟಿ, ಎಸ್.ಸಿ.ಎಸ್‌.ಪಿ.ಯಡಿ ₹21,343 ಕೋಟಿ ಹಾಗೂ ಟಿ.ಎಸ್.ಪಿ.ಯಡಿ ₹8,872 ಕೋಟಿ

ಇದನ್ನೂ ಓದಿ:


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT