ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌–2023: ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ ₹ 9,698 ಕೋಟಿ ಅನುದಾನ
LIVE

ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇಬೇಕು ಎಂಬ ಛಲತೊಟ್ಟಂತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಾರಿಯ ಬಜೆಟ್‌ನಲ್ಲಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
Last Updated 17 ಫೆಬ್ರುವರಿ 2023, 9:18 IST
ಅಕ್ಷರ ಗಾತ್ರ
09:1717 Feb 2023

ಆಯವ್ಯಯ ಪಕ್ಷಿನೋಟ

* ಆಯವ್ಯಯ ಗಾತ್ರ (ಸಂಚಿತ ನಿಧಿ)- ₹3,09,182 ಕೋಟಿ 
* ಒಟ್ಟು ಸ್ವೀಕೃತಿ- ₹3,03,910 ಕೋಟಿ 
* ರಾಜಸ್ವ ಸ್ವೀಕೃತಿ ₹2,25,910 ಕೋಟಿ
* ಸಾರ್ವಜನಿಕ ಋಣ- ₹77,750 ಕೋಟಿ ಸೇರಿದಂತೆ ಬಂಡವಾಳ ಸ್ವೀಕೃತಿ ₹78,000 ಕೋಟಿ 

ಒಟ್ಟು ವೆಚ್ಚ- ₹3,03,910 ಕೋಟಿ 
* ರಾಜಸ್ವ ವೆಚ್ಚ- ₹2,25,507 ಕೋಟಿ
* ಬಂಡವಾಳ ವೆಚ್ಚ- ₹61,234 ಕೋಟಿ ಹಾಗೂ ಸಾಲ ಮರುಪಾವತಿ ₹22,441 ಕೋಟಿ.

09:0317 Feb 2023

ವಲಯವಾರು ಹಂಚಿಕೆ

* ಕೃಷಿ ಮತ್ತು ಪೂರಕ ಚಟುವಟಿಕೆ: 39,031 ಕೋಟಿ
* ಸರ್ವೋದಯ ಮತ್ತು ಕ್ಷೇಮಾಭಿವೃದ್ಧ: 80,318 ಕೋಟಿ
* ಆರ್ಥಿಕ ಅಭಿವೃದ್ಧಿ ಉತ್ತೇಜನ: 61,488 ಕೋಟಿ
* ಬೆಂಗಳೂರು ಸಮಗ್ರ ಅಭಿವೃದ್ಧಿ: ₹ 9,698 ಕೋಟಿ
* ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ: ₹ 3,458
* ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ: ₹ 68,585 ಕೋಟಿ

08:5117 Feb 2023

– ರಾಮನಗರದ ಮಂಚನಬೆಲೆ ಹಿನ್ನೀರಿನಲ್ಲಿ ₹ 10 ಕೋಟಿ ವೆಚ್ಚದಲ್ಲಿ ರೆಸಾರ್ಟ್ ನಿರ್ಮಾಣ

– ಪ್ರಾಣಿ ಸಂಘರ್ಷದಿಂದ ಪ್ರಾಣಹಾನಿ; ಪರಿಹಾರದ ಮೊತ್ತ ₹ 7.50 ಲಕ್ಷದಿಂದ ₹ 15 ಲಕ್ಷಕ್ಕೆ ಏರಿಕೆ

– ಬೋಳು ಗುಡ್ಡ ಪ್ರದೇಶ ಪುನಶ್ಚೇತನ, ಕಾಂಡ್ಲಾ ಅರಣ್ಯೀಕರಣ ಮತ್ತು ಶೆಲ್ಟರ್‌ ಬೆಲ್ಟ್‌ ನಿರ್ವಹಣೆ ಅಡಿ 3,211 ಹೆಕ್ಟೆರ್‌ ಪ್ರದೇಶ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ 168 ಉದ್ದದ ಅರಣ್ಯೀಕರಣ ಹಾಗೂ 25 ಲಕ್ಷ ಸಸಿ ನೆಡುವ ಯೋಜನೆ.

– ನೈಸರ್ಗಿಕ ಸಂಪನ್ಯೂಲಗಳ ರಕ್ಷಣಾ ವಲಯಕ್ಕೆ ₹ 3,458 ಕೋಟಿ ಅನುದಾನ

08:0017 Feb 2023

ಕೇಂದ್ರದ ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟ ಅಭಿವೃದ್ಧಿ

07:5917 Feb 2023

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹ 100 ಕೋಟಿ

07:3917 Feb 2023

ಬಿಸಿಲು ಕುದುರೆಯಂತಹ ಬಜೆಟ್‌: ಡಿ.ಕೆ.ಶಿವಕುಮಾರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌, ಬಿಸಿಲು ಕುದುರೆಯಿದ್ದಂತೆ. ಕಣ್ಣಿಗೂ ಕಾಣದು, ಯಾರ ಕೈಗೂ ಸಿಗದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯವರ ಡಬಲ್‌ ಇಂಜಿನ್‌ ಕೆಟ್ಟು ನಿಂತು ಹೊಗೆ ಬರುತ್ತಿದೆ. ಬೊಮ್ಮಾಯಿ ಅವರು ತಾವೂ ಒಂದು ಬಜೆಟ್‌ ಮಂಡಿಸಿದ್ದೇವೆ ಎಂದು ಹೇಳಿಕೊಳ್ಳಲು ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ ಎಂದು ವ್ಯಂಗ್ಯವಾಡಿದ್ದರು.

ರಾಮನಗರದಲ್ಲಿ ರಾಮಮಂದಿರ ಕಟ್ಟುವುದಾಗಿ ತಿಳಿಸಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ಮೊದಲು ಅವರ ಪಕ್ಷದ ಕಚೇರಿ ಕಟ್ಟಲು ಹೇಳಿ ಎಂದು ತಿರುಗೇಟು ನೀಡಿದರು.

07:2717 Feb 2023

ಯುವಕರಿಗೆ ಸಿಕ್ಕಿದ್ದು..

– ಶಿಕ್ಷಣ ತೊರೆದ ಯುವಕರಿಗೆ 'ಬದುಕುವ ದಾರಿ' 3 ತಿಂಗಳ ಅವಧಿಯ ಐಟಿಐ ಸರ್ಟಿಫಿಕೇಟ್ ಕೋರ್ಸ್‌ ಹಾಗೂ ₹ 1,500 ಶಿಷ್ಯ ವೇತನ

– ಪದವಿ ಮುಗಿಸಿ ಮೂರು ವರ್ಷದ ಬಳಿಕವೂ ಉದ್ಯೋಗ ಸಿಗದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಕೊಳ್ಳುವುದನ್ನು ಪ್ರೋತ್ಸಾಹಿಸಲು ಒಂದು ಬಾರಿ ₹ 2 ಸಾವಿರ ಆರ್ಥಿಕ ನೆರವು

– ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಕ್ರೀಡಾಂಗಣಗಳಲ್ಲಿ ಜಿಮ್‌ ಸ್ಥಾಪಿಸಲು ₹ 100 ಕೋಟಿ ಅನುದಾನ

– ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ತಯಾರಿ ಉದ್ದೇಶದಿಂದ ನೊಂದಾಯಿತ ಕ್ರೀಡಾ ಸಂಸ್ಥೆಗಳಿಗೆ ₹ 25 ಲಕ್ಷ ನೆರವು

– ನರೇಗಾ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ₹ 5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ

– ₹ 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಒಲಿಂಪಿಕ್‌ ಕನಸಿನ ಯೋಜನಾ ನಿಧಿ ಸ್ಥಾಪನೆ

07:2417 Feb 2023

ಗಡಿ ಭಾಗದ ಸಮಗ್ರ ಅಭಿವೃದ್ಧಿಗೆ ₹ 150 ಕೋಟಿ ಅನುದಾನ

06:5717 Feb 2023

ಬೆಂಗಳೂರು ಅಭಿವೃದ್ಧಿ

– ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ ₹ 9,698 ಕೋಟಿ ಅನುದಾನ

– ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿನಲ್ಲಿ ₹6,000 ಕೋಟಿ ಕಾಮಗಾರಿಗಳಿಗೆ ಒತ್ತು. 

– ಹೈ ಡೆನ್ಸಿಟಿ ಕಾರಿಡಾರ್‌ ಯೋಜನೆ ಅಡಿಯಲ್ಲಿ ₹ 278 ಕೋಟಿ ವೆಚ್ಚದಲ್ಲಿ 108 ಕಿ.ಮೀ ರಸ್ತೆ ಅಭಿವೃದ್ಧಿ.

– ಮಳೆ ನೀರು ಸರಾಗವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು 195 ಕಿ.ಮೀ ಉದ್ದದ ಚರಂಡಿ ಹಾಗೂ ಕಲ್ವರ್ಟ್‌ಗಳ ನಿರ್ಮಾಣಕ್ಕೆ ₹ 1,813 ಕೋಟಿ ಅನುದಾನ

– ಆರ್ಟಿಫಿಷಿಯನ್ ಇಂಟೆಲಿಜೆನ್ಸ್‌ ಮೂಲಕ ಟ್ರಾಫಿಕ್ ನಿರ್ವಹಣೆಗೆ ಯೋಜನೆ. ಅದಕ್ಕಾಗಿ ₹ 150 ಕೋಟಿ ವೆಚ್ಚದಲ್ಲಿ 75 ಜಂಕ್ಷನ್ ಅಭಿವೃದ್ಧಿ

– ಟಿನ್‌ ಫ್ಯಾಕ್ಟರಿಯಿಂದ ಮೇಡನಹಳ್ಳಿ ವರೆಗೆ ₹ 350 ಕೋಟಿ ವೆಚ್ಚದಲ್ಲಿ 5 ಕಿ.ಮೀ ಎಲಿವೇಟೆಡ್‌ ರಸ್ತೆ ನಿರ್ಮಾಣ

– ₹ 1,000 ಕೋಟಿ ವೆಚ್ಚದಲ್ಲಿ 120 ಕಿ.ಮೀ ಆರ್ಟೀರಿಯಲ್‌ ರಸ್ತೆಯ ವೈಟ್‌ ಟಾಪಿಂಗ್‌. 300 ಕಿ.ಮೀ ಆರ್ಟೀರಿಯಲ್‌ ರಸ್ತೆ ಹಾಗೂ ಸಬ್‌ ಆರ್ಟೀರಿಯಲ್‌ ರಸ್ತೆ ಅಭಿವೃದ್ಧಿಗೆ ₹ 450 ಕೋಟಿ

– ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳ ಅಭಿವೃದ್ಧಿ, ಹಾಗೂ ಪುನರ್‌ ನಿರ್ಮಾಣಕ್ಕೆ ₹ 300 ಕೋಟಿ ಅನುದಾನ 

– 40.15 ಕಿ.ಮೀ ಮೆಟ್ರೋ ರೈಲು ಮಾರ್ಗ ಕಾರ್ಯಗತಗೊಳಿಸಲು ಯೋಜನೆ

– ಹವಾಮಾನ ಬದಲಾವಣೆ ಪರಿಣಾಮ ಕಡಿಮೆ ಮಾಡಲು ಹಾಗೂ ಪ್ರವಾಹ ನಿಯಂತ್ರಣಗೊಳಿಸಲು ವಿಶ್ವಬ್ಯಾಂಕ್‌ ಸಹಯೋಗದಲ್ಲಿ ₹ 3 ಸಾವಿರ ಕೋಟಿ ಯೋಜನೆ

– ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಸಲುವಾಗಿ BWSSBಗೆ ₹ 200 ಕೋಟಿ ನೆರವು

06:5517 Feb 2023

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ₹ 30 ಕೊಟಿ ವೆಚ್ಚದಲ್ಲಿ ಅತ್ಯಾಧುನಿಕ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪನೆ