ನವದೆಹಲಿ: ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ಸರ್ಕಾರ ಹೊಸ ಯೋಜನೆಯನ್ನು ಬಜೆಟ್ನಲ್ಲಿ ಪ್ರಕಟಿಸಿದೆ.

ಈ ಯೋಜನೆಗೆ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್‘ ಯೋಜನೆ ಎಂದು ಹೆಸರಿಡಲಾಗಿದೆ. ಖಾದಿ, ಕೈಮಗ್ಗ ಮತ್ತು ಕರಕುಶಲ ವಲಯಕ್ಕೆ ಉತ್ತೇಜನ ನೀಡುವ ಮೂಲಕ ಗ್ರಾಮಾಭಿವೃದ್ಧಿ ಸಾಧಿಸುವ ಆಶಯವನ್ನು ಯೋಜನೆ ಹೊಂದಿದೆ.

ಆಧುನೀಕರಣ ಮತ್ತು ಮೌಲ್ಯವರ್ಧನೆ ಮೂಲಕ ಭಾರತದ ಖಾದಿ, ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು, ಹೊಸ ಬ್ರ್ಯಾಂಡ್ ಸೃಷ್ಟಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.

ಮುಖ್ಯವಾಗಿ ಉದ್ಯೋಗ ಸೃಷ್ಟಿಯ ಮೂಲಕ ಗ್ರಾಮೀಣಾಭಿವೃದ್ಧಿ ಸಾಧಿಸಲು ಬಜೆಟ್ನಲ್ಲಿ ಉಪ ಕ್ರಮಗಳನ್ನು ಪ್ರಕಟಿಸಲಾಗಿದೆ. ನಗರ ವಲಸೆ ತಡೆಯಲು ಗಮನ ನೀಡಲಾಗಿದೆ. ಗಾಂಧಿ ಗ್ರಾಮ ಸ್ವರಾಜ್ ಯೋಜನೆಯನ್ನು ನೇಕಾರರಿಗೆ, ಗ್ರಾಮೀಣ ಪ್ರದೇಶದ ಸಣ್ಣ ಕೈಗಾರಿಕಾ ಘಟಕಗಳಿಗೆ, ಯುವ ಜನರಿಗೆ ಆರ್ಥಿಕ ಬಲ ತುಂಬುವಂತೆ ರೂಪಿಸಲಾಗಿದೆ. ಸ್ಥಳೀಯ ಕುಶಲ ಕರ್ಮಿಗಳನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಒಂದು ಜಿಲ್ಲೆ ಒಂದು ಉತ್ಪನ್ನ‘ (ಒಡಿಒಪಿ) ಯೋಜನೆಗೆ ಇದು ಪೂರಕವಾಗಿದೆ.

ಜವಳಿ ಕ್ಷೇತ್ರದ ಆಧುನೀಕರಣದ ಮೂಲಕ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಗಮನ ನೀಡಲಾಗಿದೆ. ’ಮೆಗಾ ಟೆಕ್ಸ್ಟೈಲ್ ಪಾರ್ಕ್‘ ಯೋಜನೆಯು ಬೃಹತ್ ಹೂಡಿಕೆ ಆಕರ್ಷಿಸುವ ಸಾಧ್ಯತೆ ಇದ್ದು, ರಫ್ತು ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಮಹತ್ವ ನೀಡಲಾಗಿದೆ. ರೇಷ್ಮೆ, ಉಣ್ಣೆ, ಸೆಣಬು, ಕೈಮಗ್ಗದ ಬಟ್ಟೆ ಸೇರಿ ಜವಳಿಯನ್ನು ಐದು ವಲಯಗಳಾಗಿ ವಿಂಗಡಿಸಿ ’ಸಮಗ್ರ ರಾಷ್ಟ್ರೀಯ ಜವಳಿ ಯೋಜನೆಯನ್ನು ಘೋಷಿಸಲಾಗಿದೆ.

ಜವಳಿ, ಚರ್ಮದ ಉತ್ಪನ್ನಗಳು, ಪಾದರಕ್ಷೆಗಳ ರಫ್ತು ಬಾಧ್ಯತಾ ಅವಧಿಯನ್ನು 6 ತಿಂಗಳಿಂದ 12 ತಿಂಗಳಿಗೆ ವಿಸ್ತರಿಸಲಾಗಿದೆ. ಬಾಧ್ಯತಾ ಅವಧಿ ವಿಸ್ತರಣೆಯು ರಫ್ತುದಾರರಿಗೆ ‘ದುಡಿಯುವ ಬಂಡವಾಳ‘ ನಿರ್ವಹಣೆಯನ್ನು ಸುಗಮಗೊಳಿಸಲಿದೆ. ಅಮೆರಿಕದಂತಹ ಹೆಚ್ಚುವರಿ ಸುಂಕ ವಿಧಿಸಿರುವ ದೇಶಗಳೊಂದಿಗೆ ರಫ್ತು ವಹಿವಾಟು ನಡೆಸಲು ಇದು ಅನುಕೂಲವಾಗಲಿದೆ.ಹೈನುಗಾರಿಕೆ, ಮೀನುಗಾರಿಕೆ, ಹಣ್ಣು, ತರಕಾರಿ ಬೆಳೆಗಳನ್ನು ಒಳಗೊಂಡ ಗರಿಷ್ಠ ಮೌಲ್ಯದ ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆ ನೀಡಲಾಗಿದೆ. ವಿಶೇಷವಾಗಿ ಕರಾವಳಿಯ ರೈತರನ್ನು ಗಮನದಲ್ಲಿಟ್ಟುಕೊಂಡು ಸಬ್ಸಿಡಿ ಆಧಾರಿತ ಸಾಲ ಯೋಜನೆಗಳನ್ನು ಪ್ರಕಟಿಸಲಾಗಿದೆ.

500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿ ಮೂಲಕ ಮೀನುಗಾರಿಕೆ ವಲಯದ ಪ್ರಗತಿಗೂ ಗಮನ ನೀಡಲಾಗಿದೆ.

ಸುಸ್ಥಿರತೆ ಉದ್ಯೋಗಸೃಷ್ಟಿ ಜಾಗತಿಕ ಮಟ್ಟದ ಸ್ಪರ್ಧೆಗೆ ಭಾರತದ ಜವಳಿ ಕ್ಷೇತ್ರವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಕ್ರಮ ವಹಿಸಲಾಗಿದೆ.
– ಶಕ್ತಿವೇಲು, ಜವಳಿ ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ) ಅಧ್ಯಕ್ಷ
.Union Budget 2026: ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ಹಾಸ್ಟೆಲ್ ಘೋಷಣೆ.Union Budget 2026: ಯಾವುದೆಲ್ಲ ಇಳಿಕೆ, ಯಾವುದೆಲ್ಲ ಏರಿಕೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.