ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಪರಿಕರ ಉತ್ಪನ್ನಗಳಿಗೆ ‘ಮೇಕ್‌ ಇನ್‌ ಇಂಡಿಯಾ’ ಬಲ

Last Updated 1 ಫೆಬ್ರುವರಿ 2020, 15:49 IST
ಅಕ್ಷರ ಗಾತ್ರ

ನವದೆಹಲಿ: ‘ಮೇಕ್‌ ಇನ್‌ ಇಂಡಿಯಾ’ ಚಿಂತನೆಯಡಿ ನೀಡುತ್ತಿದ್ದ ಉತ್ತೇಜನವನ್ನು ವೈದ್ಯಕೀಯ ಪರಿಕರಗಳ ಉತ್ಪಾದನೆಗೂ ವಿಸ್ತರಿಸುತ್ತಿದ್ದು, ಪೂರಕವಾಗಿ ಆಮದು ಉತ್ಪನ್ನಗಳ ಮೇಲೆ ಸಾಂಕೇತಿಕವಾಗಿ ಅಲ್ಪಪ್ರಮಾಣದ ಆರೋಗ್ಯ ಸೆಸ್‌ ವಿಧಿಸಲು ಉದ್ದೇಶಿಸಲಾಗಿದೆ.

ಹೀಗೆ ಸೆಸ್‌ ವಿಧಿಸುವುದರಿಂದ ಕ್ರೋಡೀಕರಣವಾಗುವ ಆರ್ಥಿಕ ಸಂಪನ್ಮೂಲವನ್ನು ವಿವಿಧ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದರು.

‘ಮೇಕ್‌ ಇನ್‌ ಇಂಡಿಯಾ ಚಿಂತನೆ ಈಗ ಲಾಭ ನೀಡಲು ಆರಂಭಿಸಿದೆ. ವಿಶ್ವದರ್ಜೆ ಗುಣಮಟ್ಟದ ಉತ್ಪನ್ನಗಳು ಉತ್ಪಾದನೆ ಆಗುತ್ತಿವೆ. ಆಮದು ಅವಲಂಬಿಸಿದ್ದ ನಾವು ಈಗ ರಫ್ತು ಮಾಡುತ್ತಿದ್ದೇವೆ. ಗುಣಮಟ್ಟದ ವೈದ್ಯಕೀಯ ಪರಿಕರಗಳು ಸ್ಥಳೀಯವಾಗಿ ಉತ್ಪಾದನೆ ಆಗುತ್ತಿವೆ’ ಎಂದರು.‌

‘ಮೇಕ್‌ ಇನ್‌ ಇಂಡಿಯಾ‘ದಡಿ ಮೊಬೈಲ್‌ ಫೋನ್‌, ಎಲೆಕ್ಟ್ರಿಕ್‌ ವಾಹನಗಳು, ಬಿಡಿಭಾಗಗಳ ಉತ್ಪಾದನೆಗೆ ಅನ್ವಯಿಸಿ ಸದ್ಯ ಸುಂಕ ದರದಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಎಲೆಕ್ಟ್ರಿಕ್‌ ವಾಹನಗಳು, ಭಾಗಶಃ ಮೊಬೈಲ್‌ ಫೋನ್‌ಗಳಿಗೆ ಅನ್ವಯಿಸಿ ಪರಿಷ್ಕರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT