ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್ ಹುದ್ದೆ ಭರ್ತಿಗೆ ನೂತನ ಸಂಸ್ಥೆ

Last Updated 1 ಫೆಬ್ರುವರಿ 2020, 7:57 IST
ಅಕ್ಷರ ಗಾತ್ರ

ನವದೆಹಲಿ: ನಾನ್ ಗೆಜೆಟ್ ಬ್ಯಾಂಕ್ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.ರಾಷ್ಟ್ರೀಯ ಉದ್ಯೋಗ ಭರ್ತಿ ಸಂಸ್ಥೆ ಇದಕ್ಕಾಗಿ ಆರಂಭಿಸಲಾಗುವುದು. ಆನ್‌ಲೈನ್‌ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸುತ್ತೇವೆ. ಪ್ರತಿ ಜಿಲ್ಲೆಯಲ್ಲಿಯೂ ಪರೀಕ್ಷಾ ಕೇಂದ್ರ ತೆಗೆಯುತ್ತೇವೆ.

ನಾನ್ ಗೆಜೆಟ್ ಬ್ಯಾಂಕ್ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ರಾಷ್ಟ್ರೀಯ ಉದ್ಯೋಗ ಭರ್ತಿ ಸಂಸ್ಥೆ ಆರಂಭಿಸುತ್ತೇವೆ. ಆನ್‌ಲೈನ್‌ ಮೂಲಕ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಪ್ರತಿ ಜಿಲ್ಲೆಯಲ್ಲಿಪರೀಕ್ಷಾ ಕೇಂದ್ರ ತೆರೆಯಲಾಗುವುದು.

ಒಂದು ಒಳ್ಳೇ ದೇಶಕ್ಕೆ ಐದು ಆಭರಣಗಳು. 1) ರೋಗವಿಲ್ಲದ ದೇಶ, 2) ಸಂಪತ್ಭರಿತ ದೇಶ 3) ಉತ್ತಮ ಇಳುವರಿಯ ಬೆಳೆ 4) ಖುಷಿಯ ಬದುಕು 5) ರಕ್ಷಣೆ. ದೇಶಕ್ಕೆ ಅಗತ್ಯ ಎಂದು ತಿರುವಳ್ಳುವರ್ ಹೇಳಿದ್ದರು.ದೇಶದಲ್ಲಿ ಸಂಪತ್ತುಸೃಷ್ಟಿಸುವವರನ್ನು ಗೌರವಿಸಲಾಗುವುದು. ರೈತರು ಮತ್ತು ರೈತರಿಗೆ ನೆರವಾಗುವವರನ್ನು ನಾವು ಬೆಂಬಲಿಸುತ್ತೇವೆ.

ರಾಷ್ಟ್ರೀಯ ಭದ್ರತೆಯುಸರ್ಕಾರದ ಮೊದಲ ಆದ್ಯತೆ. ಬದುಕುವ ಭರವಸೆ ಹುಟ್ಟಿಸುವುದೇ ಉತ್ತಮ ಆಡಳಿತ. ಅದನ್ನು ಸರ್ಕಾರ ಮಾಡುತ್ತಿದೆ. ಇದು ಸಾಧ್ಯವಾಗಲು ಸ್ವಚ್ಛ, ಭ್ರಷ್ಟ್ರಾಚಾರ ರಹಿತ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ಕಾರ ಬೇಕು.ಸರ್ಕಾರದ ಜನರಿಗಾಗಿ ಇದೆ. ದೇಶದ ಜನರನ್ನುಅನುಮಾನಿಸುವುದಿಲ್ಲ,ಕಷ್ಟಪಟ್ಟು ದುಡಿಯುವ ರೈತರು, ಉತ್ಸಾಹಿ ಯುವಕರು ಮತ್ತು ಪರಿಶ್ರಮಿ ಉದ್ಯಮಿಗಳು ಆರ್ಥಿಕತೆಯ ಆಧಾರ.

ಆಡಳಿತ ಸರಿಯಿದೆ, ತೆರಿಗೆ ವ್ಯವಸ್ಥೆ ಪಾರದರ್ಶಕವಾಗಿದೆ ಎಂಬ ಭರವಸೆಯನ್ನುವ್ಯಾಪಾರಿಗಳಲ್ಲಿ ಹುಟ್ಟಿಸಲಾಗಿದೆ.ತೆರಿಗೆ ಪಾವತಿದಾರರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ. ತೆರಿಗೆ ಪಾವತಿಯಲ್ಲಿ ಲೋಪವಾದಾಗ ಒಂದು ವೇಳೆ ಅದು ಸಿವಿಲ್ ವ್ಯಾಪ್ತಿಗೆ ಬರುವಂತಿದ್ದರೆ ಅದನ್ನು ಕ್ರಿಮಿನಲ್ ಕಾನೂನು ವ್ಯಾಪ್ತಿಗೆ ತರುವುದಿಲ್ಲ. ಕಾನೂನುಗಳಲ್ಲಿ ಸೂಕ್ತ ಬದಲಾವಣೆ ಮಾಡಲಾಗುವುದು.

ಭಾರತದಲ್ಲಿ ಅಂಕಿ ಅಂಶಗಳ ಸಂಗ್ರಹ ಮತ್ತು ದತ್ತಾಂಶ ನಿರ್ವಹಣೆಗೆ ಹೊಸ ವ್ಯವಸ್ಥೆ ಮತ್ತು ವಿಶ್ಲೇಷಣಾ ವಿಧಾನದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಾಗಬೇಕಿದೆ. 2022ರಲ್ಲಿ ಜಿ–20 ಸಮಾವೇಶ ಭಾರತದಲ್ಲಿ ನಡೆಯಲಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಲು ₹100 ಕೋಟಿ ಘೋಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT