ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸಲಿದ್ದಾರೆ.

ಸಾಂಪ್ರದಾಯಿಕ ಮಾದರಿಯಲ್ಲಿ ಬಜೆಟ್ ಭಾಷಣವನ್ನು ಪುಸ್ತಕದ ಬದಲಾಗಿ ಟ್ಯಾಬ್ಲೆಟ್ ಹಿಡಿದುಕೊಂಡೆ ಮಂಡಿಸಲಿದ್ದಾರೆ.

ಆ ಮೂಲಕ ಡಿಜಿಟಲ್ ಬಜೆಟ್ ಮಂಡನೆಯನ್ನು ಮುಂದುವರಿಸಲಿದ್ದಾರೆ.

ಕೆಂಪು ಬಣ್ಣದ ಕವರ್ನಲ್ಲಿ ಟ್ಯಾಬ್ಲೆಟ್ ಹಿಡಿದುಕೊಂಡು ಬಂದ ನಿರ್ಮಲಾ ಸೀತಾರಾಮನ್, ಮಾಧ್ಯಮ ಮಿತ್ರರಿಗೆ ಪ್ರದರ್ಶಿಸಿದ್ದಾರೆ. ಬಳಿಕ ರಾಷ್ಟ್ರಪತಿ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. 2019ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ನಿರ್ಮಲಾ, ಬ್ರೀಫ್ಕೇಸ್ ಬಜೆಟ್ ಸಾಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದರು. 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಬಳಿಕ ಮೊದಲ ಬಾರಿ ಕಾಗದ ಪತ್ರಗಳನ್ನು ಬಿಟ್ಟು ಡಿಜಿಟಲ್ ಟ್ಯಾಬ್ಲೆಟ್ನಲ್ಲಿ ಬಜೆಟ್ ಮಂಡಿಸಿದ್ದರು.
.Budget 2025 LIVE: ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ; ವಿಜ್ಞಾನ ಕ್ಷೇತ್ರಕ್ಕೆ ಕನಿಷ್ಠ ಅನುದಾನ.Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಮುಖ್ಯಾಂಶಗಳು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.