ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2020: ಸರಕು ಸಾಗಣೆ ಕಂಪನಿಗಳ ಷೇರು ಏರಿಸಿದ ಕೋಲ್ಡ್ ಸ್ಟೋರೇಜ್ ಘಟಕ

Last Updated 1 ಫೆಬ್ರುವರಿ 2020, 7:21 IST
ಅಕ್ಷರ ಗಾತ್ರ

ಮುಂಬೈ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಡೆರಹಿತ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಿಸುವ ಬಗ್ಗೆಶನಿವಾರ ಸಂಸತ್‌ನಲ್ಲಿ ಪ್ರಸ್ತಾಪಿಸಿದ ಕೆಲವೇ ಕ್ಷಣಗಳಲ್ಲಿ ಸರಕು ಸಾಗಣೆ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ.

ರಾಷ್ಟ್ರೀಯ ಕೃಷಿ ಬ್ಯಾಂಕ್‌ಗಳು ಮತ್ತು ಗ್ರಾಮೀಣ ಅಭಿವೃದ್ಧಿ ಗೋದಾಮುಗಳು ಕೋಲ್ಡ್ ಸ್ಟೋರೇಜ್ ಘಟಕಗಳ ನೀಲ ನಕ್ಷೆ ತಯಾರು ಮಾಡುತ್ತವೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಗೋದಾಮು ರಶೀದಿ ಪಡೆಯುವ ನಿಟ್ಟಿನಲ್ಲಿ ಈಗಾಗಲೇ ₹ 6000 ಕೋಟಿಗೂ ಮೀರಿದ ಹಣವನ್ನು ವ್ಯಯಿಸಲಾಗಿದೆ ಎಂದು ಹಣಕಾಸು ಸಚಿವೆ ಸಂಸತ್ತಿಗೆ ಮಾಹಿತಿ ನೀಡಿದರು.

ಕೋಲ್ಡ್‌ ಸ್ಟೋರೇಜ್‌ ಘಟಕಗಳ ಬಗ್ಗೆ ಪ್ರಸ್ತಾಪಿಸಿದ ಕೆಲವೇ ಕ್ಷಣಗಳಲ್ಲಿ ಸರಕು ಸಾಗಣೆ ಕಂಪನಿಗಳ ಷೇರು ವಹಿವಾಟು ಏರಿಕೆ ಕಂಡಿದೆ.

ಷೇರು ಏರಿಕೆ ಕಂಡ ಪ್ರಮುಖ ಸರಕು ಸಾಗಣೆ ಕಂಪನಿಗಳು

ಕಂಪನಿ– ಏರಿಕೆ

ಏಜಿಸ್ ಲಾಜಿಸ್ಟಿಕ್ಸ್– ಶೇ.6.39
ಲ್ಯಾನ್ಸರ್ ಕಂಟೇನರ್– ಶೇ.5.40
ಎಬಿಸಿ ಇಂಡಿಯಾ– ಶೇ.4.60
ಕೇಸರ್ ಟರ್ಮಿನಲ್ಸ್ ಅಂಡ್‌ ಇನ್‌ಪ್ರಾಸ್ಟ್ರಕ್ಚರ್‌– ಶೇ.4.33
ಚಾರ್ಟರ್ಡ್ ಲಾಜಿಸ್ಟಿಕ್ಸ್– ಶೇ.2.95
ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ– ಶೇ.1.63
ವಿಆರ್‌ಎಲ್ ಲಾಜಿಸ್ಟಿಕ್ಸ್– ಶೇ.1.33
ಆಲ್ಕಾರ್ಗೋ ಲಾಜಿಸ್ಟಿಕ್ಸ್– ಶೇ.1.33
ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್–ಶೇ.1.01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT