ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ 2020: ಯಾವ ಕ್ಷೇತ್ರಕ್ಕೆ ಸಿಂಹಪಾಲು? ಯಾರಿಗೆ ಲಾಭ? 

Last Updated 1 ಫೆಬ್ರುವರಿ 2020, 13:03 IST
ಅಕ್ಷರ ಗಾತ್ರ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ 2020-21ನೇ ಸಾಲಿನ ಬಜೆಟ್‌ನಲ್ಲಿ ದೇಶದ ಆದಾಯವನ್ನು ಉತ್ತೇಜನಗೊಳಿಸುವ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತುಸಾಮಾಜಿಕ ಕಾಳಜಿ ಈ ಮೂರು ಮೂಲಸೂತ್ರಗಳನ್ನು ಹೊಂದಿರುವ ಬಜೆಟ್ ಇದಾಗಿದೆ ಎಂದು ಸಚಿವೆ ಹೇಳಿದ್ದಾರೆ.

ಅಂದಹಾಗೆ ಈಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಕ್ಕಿದೆ ಮತ್ತು ಯಾವುದು ಕಡೆಗಣನೆಗೆ ಒಳಗಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಈ ಕ್ಷೇತ್ರಗಳಿಗೆ ಸಿಕ್ಕಿದೆ ಸಿಂಹಪಾಲು

ಸಾರಿಗೆ ಸೌಕರ್ಯ

ಭಾರತದ ಹೆದ್ದಾರಿಮತ್ತು ರೈಲ್ವೆ ಸಂಪರ್ಕ ವ್ಯವಸ್ಥೆಗಾಗಿ ₹1.7 ಲಕ್ಷಕೋಟಿಅನುದಾನ ನೀಡಲಾಗಿದೆ. ಹೆದ್ದಾರಿಗಳ ಅಭಿವೃದ್ಧಿ ಮೂಲಕ ಆದಾಯ ಕ್ರೋಡೀಕರಣ ಮಾಡಲು ಯೋಜನೆ ರೂಪಿಸಲಾಗಿದೆ.

ಯಾರಿಗೆ ಲಾಭ?:ಎಲ್ ಅಂಡ್ ಟಿ , ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಮತ್ತು ಐಆರ್‌ಬಿ ಇನ್‌ಫ್ರಾ

ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ

ಮೊಬೈಲ್ ಫೋನ್, ಎಲೆಕ್ರ್ಟಾನಿಕ್ ಉಪಕರಣ, ಸೆಮಿ ಕಂಡಕ್ಟರ್ ನಿರ್ಮಾಣ ಸೇರಿದಂತೆ ವೈದ್ಯಕೀಯ ಸಾಧನ ನಿರ್ಮಾಣ ಕಂಪನಿಗಳಿಗೆ ಬಜೆಟ್ ಉತ್ತಮ ಪ್ರೋತ್ಸಾಹ ನೀಡಿದೆ.

ಯಾರಿಗೆ ಲಾಭ?:ಡಿಕ್ಸನ್ ಟೆಕ್ನಾಲಜಿ, ಆಂಬರ್ ಎಂಟರ್‌ಪ್ರೈಸಸ್, ಸಬ್ರೋಸ್

ಗ್ರಾಮೀಣ ಭಾರತ

ಕೃಷಿ ಮತ್ತು ಗ್ರಾಮೀಣ ವಲಯಕ್ಕೆ ₹ 2.83 ಲಕ್ಷ ಕೋಟಿಅನುದಾನ ಘೋಷಿಸಲಾಗಿದೆ. ಆದಾಗ್ಯೂ ಮುಂದಿನ ವರ್ಷಕ್ಕೆ ಕೃಷಿ ಸಾಲ ₹ 15 ಲಕ್ಷ ಕೋಟಿ ಗುರಿಯನ್ನಿರಿಸಲಾಗಿದೆ. ಮತ್ಸ್ಯೋದ್ಯಮವನ್ನು ವಿಸ್ತರಿಸುವ ಯೋಜನೆಯನ್ನು ಸರ್ಕಾರ ಪ್ರಸ್ತಾಪ ಮಾಡಿದ್ದು, ಮತ್ಸ್ಯೋದ್ಯಮಿಗಳ 500 ಸಂಘಟನೆಯನ್ನು ರೂಪಿಸಲಿದೆ.

ಯಾರಿಗೆ ಲಾಭ?: ಅವಾಂತಿ ಫೀಡ್ಸ್, ಅಪೆಕ್ಸ್ ಫ್ರೋಜನ್ ಫುಡ್ಸ್ಮತ್ತು ವಾಟರ್‌ಬೇಸ್‌

ಆಹಾರ ಸಾಮಾಗ್ರಿಗಳು ಕೆಡದಂತೆ ಸಾಗಣೆ ಮಾಡಲು ಹವಾ ನಿಯಂತ್ರಿತ ಬೋಗಿಗಳನ್ನು ರೈಲಿನಲ್ಲಿ ಒದಗಿಸಲಾಗುವುದು. ಈ ಮೂಲಕ ಕಂಟೇನರ್ಕಾರ್ಪೊರೇಷನ್ ಆಫ್ ಇಂಡಿಯಾಗೆ ಹೆಚ್ಚು ಅನುಕೂಲವಾಗಲಿದೆ. ಗ್ರಾಹಕರ ಸರಕುಗಳ ಸೂಚ್ಯಂಕ ವೇಗವಾಗಿ ಪುಟಿದೇಳುತ್ತಿದ್ದು ಇಮಾಮಿ, ಹಿಂದೂಸ್ತಾನ್ ಯೂನಿಲಿವರ್, ಡಾಬರ್, ಟಾಟಾ ಗ್ಲೋಬಲ್ ಹುರುಪುಗೊಳ್ಳಲಿದೆ.

ನೀರು

ನೀರಿನ ಅಭಾವವಿರುವ ಜಿಲ್ಲೆಗಳಿಗೆ ಸಹಾಯವಾಗುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ನೀರು ಮತ್ತು ಒಳಚರಂಡಿ ವ್ಯವಸ್ಥೆ ವಿನ್ಯಾಸ ಮತ್ತು ನಿರ್ಮಾಣ ಸಂಸ್ಥೆಯಾo ವಿಎ ಟೆಕ್ ವಾಬ್ಯಾಗ್ ಲಿಮಿಟೆಡ್ ಇದರ ಪ್ರಯೋಜನ ಪಡೆಯಲಿದೆ.

ರೈತರು ಸೋಲಾರ್ ಪಂಪ್ ಅಳವಡಿಸಲಿರುವ ಯೋಜನೆಯನ್ನು ಘೋಷಿಸುತ್ತಿದ್ದಂತೆ ಶಕ್ತಿ ಪಂಪ್ಸ್ ಲಿಮಿಟೆಡ್ ಇಂಡಿಯಾ ಕಂಪನಿ ಷೇರುಪೇಟೆಯಲ್ಲಿ ಚೇತರಿಕೆ ಕಂಡಿತು.

2024ರ ವೇಳೆಗೆ ದೇಶದ ಮನೆಮನೆಗಳಿಗೆ ಪೈಪ್ ನೀರು ಸರಬರಾಜು ಮಾಡುವ ಯೋಜನೆ ಘೋಷಿಸಲಾಗಿದೆ. ಇದಕ್ಕಾಗಿ ₹ 3.6 ಲಕ್ಷ ಕೋಟಿ ಹೂಡಿಕೆ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.

ಯಾರಿಗೆ ಲಾಭ?:ಜೈನ್ ಇರಿಗೇಷನ್ ಸಿಸ್ಟಮ್ಸ್ ಲಿಮಿಟೆಡ್, ಕೆಎಸ್‌ಬಿ ಲಿಮಿಟೆಡ್, ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ , ಜೆ.ಕೆ ಅಗ್ರಿ ಜೆನೆಟಿಕ್ಸ್ ಲಿಮಿಟೆಡ್, ಪಿಐ ಇಂಡಸ್ಟ್ರೀಸ್.

ಕ್ಲೀನ್ ಇಂಡಿಯಾ ಮಿಷನ್‌ಗೆ ₹ 12,300 ಕೋಟಿಮೀಸಲು

ಯಾರಿಗೆ ಲಾಭ?: ಹಿಂದೂಸ್ತಾನ್ ಯೂನಿಲಿವರ್, ಪ್ರೋಕ್ಟರ್ ಅಂಡ್ ಗ್ಯಾಂಬಲ್, ಗೋದ್ರೇಜ್.

ಟೆಲಿಕಾಂ

ಗ್ರಾಮಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಕಲ್ಪಿಸಲು ಭಾರತ್ ನೆಟ್ ಅಭಿವೃದ್ಧಿ ಪಡಿಸಲಾಗುವುದು

ಯಾರಿಗೆ ಲಾಭ?:ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಎಫ್‌ಸಿಎಲ್ ಲಿಮಿಟೆಡ್

ಆನ್‌ಲೈನ್ ಶಿಕ್ಷಣ

ಶಿಕ್ಷಣ ವಲಯಕ್ಕೆ ₹ 99,300 ಕೋಟಿಮೀಸಲಿಡಲಾಗಿದೆ. ಅದೇ ರೀತಿ ಆನ್‌ಲೈನ್ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಲಾಗಿದೆ.

ಯಾರಿಗೆ ಲಾಭ?: ಎನ್‌ಐಐಟಿ ಮತ್ತು ಎಂಟಿ ಎಡ್ಯುಕೇರ್

ಐಟಿ ವಲಯ

ಡೇಟಾ ಸೆಂಟರ್ ಪಾರ್ಕ್‌ಗಳ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

ಯಾರಿಗೆ ಲಾಭ?:ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್‌ಸಿ ಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರ, ಎಲ್‌ಟಿಐ, ಮೈಂಡ್ ಟ್ರೀಸ್,ಪೆರ್ಸಿಸ್ಟೆಂಟ್ ಮತ್ತು ಹೆಕ್ಸಾವೇರ್. ಅದಾನಿ ಎಂಟರ್‌ಪ್ರೈಸಸ್‌ಗೂ ಇದರಿಂದ ಲಾಭವಾಗಲಿದೆ.

ಪೈಪ್‌ಲೈನ್ ಮತ್ತು ನಗರ ಅನಿಲ ಪೂರೈಕೆದಾರರು

ರಾಷ್ಟ್ರೀಯ ಗ್ಯಾಸ್ಗ್ರಿಡ್‌ನ್ನು 16,200 ಕಿಮೀಗಿಂತ 27,000 ಕಿಮೀವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.

ಯಾರಿಗೆ ಲಾಭ?: ವೆಲ್ಸ್‌ಪನ್ ಕಾರ್ಪೊರೇಷನ್, ಮಹಾರಾಷ್ಟ್ರ ಸೀಮ್‌ಲೆಸ್ ಲಿಮಿಟೆಡ್, ರತ್ನಮಣಿ ಮೆಟಲ್ಸ್ ಅಂಡ್ ಟ್ಯೂಬ್ಸ್, ಜಿಂದಾಲ್ ಸೋ, ಮ್ಯಾನ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್.ಗ್ಯಾಸ್ ಗ್ರಿಡ್ ವಿಸ್ತರಣೆಯಿಂದಾಗಿ ಐಡಿಎಲ್, ಎಂಜಿಎಲ್ ಮತ್ತು ಗುಜರಾತ್ ಗ್ಯಾಸ್‌ಗೆ ಲಾಭವಾಗಲಿದೆ.

ನಷ್ಟ ಯಾರಿಗೆ?
ವಿಮೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್
ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ
ರಸಗೊಬ್ಬರ ಕಂಪನಿ
ಸರಕು ಸಾಗಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT