ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಮೂಲಕ ಮಾರ್ಚ್ನಲ್ಲಿ ₹1,60,122 ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್ಟಿ ವ್ಯವಸ್ಥೆಯು ಜಾರಿಗೆ ಬಂದಾಗಿನಿಂದ ಈವರೆಗಿನ ಅವಧಿಯಲ್ಲಿ ಎರಡನೇ ಅತ್ಯಧಿಕ ಸಂಗ್ರಹ ಇದಾಗಿದೆ. 2022ರ ಏಪ್ರಿಲ್ನಲ್ಲಿ 1.67 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.

ಕಳೆದ ವರ್ಷದ ಮಾರ್ಚ್ಗೆ ಹೋಲಿಸಿದರೆ ಈ ಮಾರ್ಚ್ನಲ್ಲಿ ವರಮಾನ ಸಂಗ್ರಹದಲ್ಲಿ ಶೇ 13ರಷ್ಟು ಏರಿಕೆ ಕಂಡುಬಂದಿದೆ. ಈ ಮಾರ್ಚ್ನಲ್ಲಿ ಸಂಗ್ರಹ ಆಗಿರುವ ಒಟ್ಟು ಮೊತ್ತದಲ್ಲಿ ಸಿಜಿಎಸ್ಟಿ ₹29,546 ಕೋಟಿ, ಎಸ್ಜಿಎಸ್ಟಿ ₹37,314 ಕೋಟಿ, ಐಜಿಎಸ್ಟಿ ₹82,907 ಕೋಟಿ ಮತ್ತು ಸೆಸ್ ₹10,355 ಕೋಟಿ ಸೇರಿದೆ ಎಂದು ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

2022–23ನೇ ಹಣಕಾಸು ವರ್ಷದಲ್ಲಿ 18.10 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಇದು ಹಿಂದಿನ ಅವಧಿಗಿಂತಲೂ ಶೇ 22ರಷ್ಟು ಹೆಚ್ಚಿಗೆ ಇದೆ.

ಮಾರ್ಚ್ನಲ್ಲಿ ಸರಕುಗಳ ಆಮದಿನಿಂದ ಬರುವ ವರಮಾನವು ಶೇ 8ರಷ್ಟು ಹೆಚ್ಚಾಗಿದೆ. ದೇಶಿ ವಹಿವಾಟಿನಿಂದ (ಸೇವೆಗಳ ಆಮದು ಸೇರಿ) ಬರುವ ವರಮಾನ ಶೇ 14ರಷ್ಟು ಹೆಚ್ಚಾಗಿದೆ.

ಭಾರತದ ಆರ್ಥಿಕತೆಯು ಬೆಳವಣಿಗೆಯ ಹಾದಿಯಲ್ಲಿದೆ ಎನ್ನುವುದನ್ನು ತಿಂಗಳ ಮತ್ತು ವಾರ್ಷಿಕ ಜಿಎಸ್ಟಿ ಸಂಗ್ರಹವು ಸೂಚಿಸುತ್ತಿದೆ ಎಂದು ಕೆಪಿಎಂಜಿ ಇಂಡಿಯಾದ ಪರೋಕ್ಷ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.