ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ತಂಡ ನವೆಂಬರ್ 14ರಿಂದ ಭಾರತದ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಪಿಚ್ಗಳ ಪರಿಸ್ಥಿತಿ ತಿಳಿದುಕೊಳ್ಳಲು ಈ ತಿಂಗಳ ಕೊನೆಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಎ ತಂಡದ ಜೊತೆಗೆ ಟೆಸ್ಟ್ ತಂಡದ ನಾಯಕ ತೆಂಬಾ ಬವುಮಾ ಕೂಡ ಭಾರತಕ್ಕೆ ಆಗಮಿಸಲಿದ್ದಾರೆ.

ಗಾಯದಿಂದ ಬಳಲುತ್ತಿರುವ ಬವುಮಾ ಸದ್ಯ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಮಾತ್ರವಲ್ಲ, ಇದಾದ ಬಳಿಕ ನಡೆಯಲಿರುವ ಏಕದಿನ ಸರಣಿಯಿಂದಲೂ ವಿಶ್ರಾಂತಿ ಪಡೆದುಕೊಂಡಿದ್ದಾರೆ.

ಬವುಮಾ 'ಎ' ತಂಡದಲ್ಲಿ ಆಡುವುದರಿಂದ ಭಾರತದ ಪಿಚ್ಗಳನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ. ಮಾತ್ರವಲ್ಲದೆ, ಅವರು ಹಲವು ದಿನಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದಿದ್ದು, ತಂಡಕ್ಕೆ ಮರಳಲು ಕೂಡ ಸಹಕಾರಿಯಾಗಲಿದೆ.

ESPNCricinfo ವರದಿಯ ಪ್ರಕಾರ, ಬವುಮಾ ‘ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಪ್ರಥಮ ದರ್ಜೆ ಪಂದ್ಯಗಳ ಪೈಕಿ ಎರಡನೇ ಪಂದ್ಯದಲ್ಲಿ ಬವುಮಾ ಅವರು ಆಡುವ ಸಾಧ್ಯತದೆ ಇದೆ’.

ನವೆಂಬರ್ 14ರಿಂದ ಡಿಸೆಂಬರ್ 19ರವರೆಗೆ ನಡೆಯಲಿರುವ ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ಸದ್ಯ, ಭಾರತ ಪ್ರವಾಸಕ್ಕೆ ಆಯ್ಕೆಯಾಗಿರುವ ದಕ್ಷಿಣ ಆಫ್ರಿಕಾ ಎ ತಂಡವನ್ನು ಬ್ಯಾಟರ್ ಮಾರ್ಕ್ವೆಸ್ ಅಕರ್ಮನ್ ಮುನ್ನಡೆಸಲಿದ್ದಾರೆ. ಇದರಲ್ಲಿ ಜುಬೇರ್ ಹಮ್ಜಾ ಮತ್ತು ಬ್ಯಾಟರ್ ಪ್ರೆನೆಲನ್ ಸುಬ್ರಯಾನ್ ಕೂಡ ಇದ್ದಾರೆ. ಈ ಇಬ್ಬರು ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ತಂಡದ ಭಾಗವಾಗಿದ್ದಾರೆ.

ನಾಲ್ಕು ದಿನಗಳ ಎರಡು ಪಂದ್ಯಗಳ ಟೆಸ್ಟ್ ಅಕ್ಟೋಬರ್ 30 ರಿಂದ ನವೆಂಬರ್ 9 ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯಲಿವೆ.
.ವಿಡಿಯೋ: ODI ನಾಯಕನಾದ ಬಳಿಕ ವಿರಾಟ್, ರೋಹಿತ್ರನ್ನು ಭೇಟಿಯಾದ ಗಿಲ್.Video: ಪರ್ತ್ನಲ್ಲಿ ಕಠಿಣ ಅಭ್ಯಾಸ ನಡೆಸಿದ ಕೊಹ್ಲಿ, ರೋಹಿತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.