ಐ.ಟಿ. ವಿವರ ಸಲ್ಲಿಕೆ ಹೆಚ್ಚಳ

ನವದೆಹಲಿ: ಈ ವರ್ಷದಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಿದವರ ಪ್ರಮಾಣದಲ್ಲಿ ಶೇಕಡ 5ರಷ್ಟು ಹೆಚ್ಚಳ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
2020ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಸಂಬಂಧಿಸಿದಂತೆ 5.95 ಕೋಟಿಗಿಂತ ಹೆಚ್ಚಿನ ಆದಾಯ ತೆರಿಗೆ ವಿವರಗಳು 2021ರ ಜನವರಿ 10ರವರೆಗೆ ಸಲ್ಲಿಕೆಯಾಗಿವೆ. ವ್ಯಕ್ತಿಗಳು ತಮ್ಮ ಆದಾಯ ತೆರಿಗೆ ವಿವರ ಸಲ್ಲಿಸುವುದಕ್ಕೆ ಜನವರಿ 10 ಕಡೆಯ ದಿನವಾಗಿತ್ತು. ಕಂಪನಿಗಳು ಆದಾಯ ತೆರಿಗೆ ವಿವರ ಸಲ್ಲಿಸಲು ಫೆಬ್ರುವರಿ 15ರವರೆಗೂ ಅವಕಾಶ ಇದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.