ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಭರಣಗಳ ಮಜೂರಿ ಶುಲ್ಕದ ಮೇಲೆ ಶೇ 50ರಷ್ಟು ರಿಯಾಯಿತಿ

Published 21 ಜೂನ್ 2024, 21:30 IST
Last Updated 21 ಜೂನ್ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಸಿದ್ಧ ಆಭರಣ ಬ್ರ್ಯಾಂಡ್ ಆಗಿರುವ ಜೋಯಾಲುಕ್ಕಾಸ್‌ನಿಂದ ಆಭರಣಗಳ ಮಜೂರಿ ಶುಲ್ಕದ ಮೇಲೆ ಶೇ 50ರಷ್ಟು ರಿಯಾಯಿತಿ ಪ್ರಕಟಿಸಲಾಗಿದೆ. 

ಈ ವಿಶೇಷ ಕೊಡುಗೆಯು ಚಿನ್ನ, ವಜ್ರ, ಅಮೂಲ್ಯ ಹರಳು ಮತ್ತು ಬೆಳ್ಳಿ ಆಭರಣಗಳ ಮೇಲೆ ದೊರೆಯಲಿದೆ. ದೇಶದ ಎಲ್ಲಾ ಮಳಿಗೆಗಳಲ್ಲಿ ಜುಲೈ 14ರ ವರೆಗೆ ಈ ಇನ್‌ಕ್ರೆಡಿಬಲ್ ಜ್ಯುವೆಲ್ಲರಿ ಮಾರಾಟ ನಡೆಯಲಿದೆ ಎಂದು ಕಂಪನಿ ತಿಳಿಸಿದೆ. 

ಗ್ರಾಹಕರಿಗೆ ಆಭರಣದ ಖರೀದಿಯೊಂದಿಗೆ ಉಚಿತ ಆಜೀವ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ಮತ್ತು ಮರು ಖರೀದಿಯ ಖಾತರಿ ದೊರೆಯಲಿದೆ. ಆಭರಣ ಪ್ರಿಯರು ಸಮೀಪದ ಜೋಯಾಲುಕ್ಕಾಸ್‌ ಮಳಿಗೆಗಳಿಗೆ ತೆರಳಿ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದೆ.

‘ಗ್ರಾಹಕರಿಗೆ ಸರಿಸಾಟಿಯಿಲ್ಲದ ಆಭರಣ ಖರೀದಿಯ ಅನುಭವ ನೀಡಲು ಕಂಪನಿ ಬದ್ಧವಾಗಿದೆ. ಎಲ್ಲಾ ಆಭರಣ ಸಂಗ್ರಹಣೆ ಮೇಲೆ ರಿಯಾಯಿತಿ ಸೌಲಭ್ಯ ದೊರೆಯಲಿದೆ’ ಎಂದು ಜೋಯಾಲುಕ್ಕಾಸ್‌ ಸಮೂಹದ ಸಿಇಒ ಜೋಯ್‌ ಆಲುಕ್ಕಾಸ್‌ ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT