ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ದೇಶಗಳ ಅತ್ಯಂತ ಪ್ರಭಾವಿ ಕಾರ್ಪೊರೇಟ್‌ಗಳ ಮುಖ್ಯಸ್ಥರಲ್ಲಿ 58 ಭಾರತ ಸಂಜಾತರು

Last Updated 10 ಜುಲೈ 2020, 5:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಸಂಜಾತ 58 ಪ್ರತಿಭಾನ್ವಿತರು ಸದ್ಯಕ್ಕೆ 11 ದೇಶಗಳ ಅತ್ಯಂತ ಪ್ರಭಾವಿ ಕಾರ್ಪೊರೇಟ್‌ಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕದ ಇಂಡಿಯನ್‌ ಡೈಸ್ಪೋರಾ ಅರ್ಗನೈಷೇನ್‌ ತಿಳಿಸಿದೆ.

ಅಮೆರಿಕ, ಕೆನಡಾ, ಇಂಗ್ಲೆಂಡ್‌, ಸಿಂಗಪುರ ಸೇರಿದಂತೆ 11 ದೇಶಗಳಿಗೆ ಸೇರಿದ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಾಗಿ (ಸಿಇಒ) ಭಾರತ ಸಂಜಾತರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಐವರು ಮಹಿಳೆಯರು ಇದ್ದಾರೆ.

ಭಾರತ ಸಂಜಾತರು ಮುಖ್ಯಸ್ಥರಾಗಿರುವ ಈ ಎಲ್ಲ ಕಂಪನಿಗಳ ಒಟ್ಟಾರೆ ಸಿಬ್ಬಂದಿ ಸಂಖ್ಯೆ 36 ಲಕ್ಷ ಇದೆ. ಅವುಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ₹ 300 ಲಕ್ಷ ಕೋಟಿಗೆ ತಲುಪಿದೆ. ಒಟ್ಟಾರೆ ವರಮಾನವು ₹ 75 ಲಕ್ಷ ಕೋಟಿಗಳಷ್ಟಿದೆ.

‘ಭಾರತ ಸಂಜಾತರು ಈ ವಿಶಿಷ್ಟ ಸಾಧನೆ ಮಾಡಿರುವುದು ನಾವೆಲ್ಲ ಹೆಮ್ಮೆಪಡುವ ಮತ್ತು ಸಂಭ್ರಮಪಡುವ ಸಂಗತಿಯಾಗಿದೆ’ ಎಂದು ಸಿಲಿಕಾನ್‌ ವ್ಯಾಲಿಯ ಉದ್ಯಮಿಯೂ ಆಗಿರುವ ಇಂಡಿಯಾಸ್ಪೋರಾ ಸ್ಥಾಪಕ ಎಂಆರ್‌ ರಂಗಸ್ವಾಮಿ ಹೇಳಿದ್ದಾರೆ.

’ಉದ್ಯಮ ವಲಯದಲ್ಲಿ ಭಾರತ ಸಂಜಾತರು ಹೊಂದಿರುವ ಈ ವಿಶಿಷ್ಟ ಸ್ಥಾನಮಾನವು ಬೀರಿರುವ ಪ್ರಭಾವವು ಅಸಾಮಾನ್ಯವಾದುದಾಗಿದೆ. ಕಾರ್ಪೊರೇಟ್‌ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿರುವ ಭಾರತ ಮೂಲದವರು ಸಕಾರಾತ್ಮಕ ಬದಲಾವಣೆಯ ಹರಿಕಾರರೂ ಆಗಿದ್ದಾರೆ.

‘ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಷ್ಟೇ ಅಲ್ಲದೆ, ಬ್ಯಾಂಕಿಂಗ್‌, ಎಲೆಕ್ಟ್ರಾನಿಕ್ಸ್‌, ಗ್ರಾಹಕರ ಉತ್ಪನ್ನ ಮತ್ತು ಸಲಹಾ ಕ್ಷೇತ್ರಗಳಲ್ಲೂ ಇವರು ಮುಂಚೂಣಿಯಲ್ಲಿದ್ದಾರೆ. ಈ ಸಿಇಒಗಳಲ್ಲಿ 37 ವರ್ಷದ ಕಿರಿಯರಿಂದ ಹಿಡಿದು 74 ವರ್ಷದ ಹಿರಿಯರೂ ಇದ್ದಾರೆ. ಇವರೆಲ್ಲರ ಸರಾಸರಿ ವಯಸ್ಸು 54 ಇದೆ. ಕೊರೊನಾ ಪಿಡುಗಿನ ಸಂದರ್ಭದಲ್ಲಿ ಈ ಕಂಪನಿಗಳು ಮಾನವೀಯ ನೆರವುಕಲ್ಪಿಸುವಲ್ಲಿ ಮತ್ತು ಸಾಮಾಜಿಕ ಬದಲಾವಣೆ ತರುವಲ್ಲಿ ಮುಂಚೂಣಿಯಲ್ಲಿ ಇವೆ‘ ಎಂದು ಹೇಳಿದ್ದಾರೆ.

ಭಾರತ ಸಂಜಾತರಲ್ಲಿ ವಲಸೆ ಹೋದವರು ಮತ್ತು ವಿದೇಶಗಳಲ್ಲಿ ಜನಿಸಿದವರೂ ಸೇರಿದ್ದಾರೆ.

36 ಲಕ್ಷ

ಭಾರತ ಸಂಜಾತರು ಮುಖ್ಯಸ್ಥರಾಗಿರುವ ಕಂಪನಿಗಳ ವ್ಯಾಪ್ತಿಯಲ್ಲಿನ ಸಿಬ್ಬಂದಿ ಸಂಖ್ಯೆ

₹ 300 ಲಕ್ಷ ಕೋಟಿ

ಕಂಪನಿಗಳ ಮಾರುಕಟ್ಟೆ ಮೌ್ಲ್ಯ

₹ 75 ಲಕ್ಷ ಕೋಟಿ

ಕಂಪನಿಗಳ ವಾರ್ಷಿಕ ವರಮಾನ

5

58 ಸಿಇಒಗಳಲ್ಲಿ ಮಹಿಳೆಯರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT