ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 69 ಲಕ್ಷ 5ಜಿ ಗ್ರಾಹಕರು: ಏರ್‌ಟೆಲ್‌

Published 29 ಏಪ್ರಿಲ್ 2024, 14:31 IST
Last Updated 29 ಏಪ್ರಿಲ್ 2024, 14:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ತನ್ನ 5ಜಿ ಸೌಲಭ್ಯವನ್ನು 69 ಲಕ್ಷ ಜನರು ಪಡೆದುಕೊಂಡಿದ್ದಾರೆ. 5ಜಿ ಸೇವೆ ಪಡೆದುಕೊಳ್ಳುತ್ತಿರುವ ಗ್ರಾಹಕರ ಸಂಖ್ಯೆಯು ಕಳೆದ 6 ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಭಾರ್ತಿ ಏರ್‌ಟೆಲ್‌ ಹೇಳಿಕೊಂಡಿದೆ.

‘ನಮ್ಮ ಕಂಪನಿಯು 5ಜಿ ನೆಟ್‌ವರ್ಕ್‌ ಅನ್ನು ರಾಜ್ಯದಾದ್ಯಂತ ವಿಸ್ತರಿದ್ದು ಮತ್ತು 5ಜಿ ಸೇವೆ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದು ಗ್ರಾಹಕರ ಸಂಖ್ಯೆ ಏರಿಕೆಯಾಗಲು ಪ್ರಮುಖ ಕಾರಣಗಳು’ ಎಂದು ಕಂಪನಿ ಹೇಳಿದೆ.

‘ಕರ್ನಾಟಕದಾದ್ಯಂತ ನೆಟ್‌ವರ್ಕ್‌ ವಿಸ್ತರಿಸಿಕೊಳ್ಳಲು ಬೇಕಾದ ಮೂಲಸೌಕರ್ಯಗಳನ್ನು ಹೆಚ್ಚು ಮಾಡಿಕೊಳ್ಳುವತ್ತ ನಾವು ಹೆಚ್ಚು ಗಮನ ಇರಿಸಿದ್ದೇವೆ’ ಎಂದು ಕಂಪನಿಯ ಕರ್ನಾಟಕದ ಸಿಇಒ ವಿವೇಕ್‌ ಮೆಹೆಂದಿರಟ್ಟ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT