ಬೆಂಗಳೂರು: ಇತ್ತೀಚೆಗೆ ಉದ್ಯೋಗಿಗಳ ಕೆಲಸದ ಅವಧಿ ಕುರಿತು ವಿವಾದಾತ್ಮಕವಾಗಿ ಹೇಳಿದ್ದ ಎಲ್ ಆ್ಯಂಡ್ ಟಿ ಕಂಪನಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆಯನ್ನು ಭಾರತ್ ಪೇ ಕಂಪನಿ ಸಿಇಒ ನಳಿನ್ ನೇಗಿ ಅವರು ವಿರೋಧಿಸಿದ್ದಾರೆ.

‘ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಹೆಂಡತಿಯ ಮುಖ ನೋಡಿಕೊಡು ಇರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಿ. ಶ್ರಮವಹಿಸಿ, ದುಡಿಯಲು ಭಾನುವಾರದ ರಜೆಯನ್ನೂ ತ್ಯಜಿಸಿ’ ಎಂದು ಸುಬ್ರಹ್ಮಣ್ಯನ್ ಹೇಳಿದ್ದರು.

ಎಬಿಪಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿರುವ ನಳಿನ್ ನೇಗಿ ಅವರು, ಎಷ್ಟು ಅವಧಿಯ ಕೆಲಸ ಮಾಡಿದ್ದೇವೆ ಎನ್ನುವುದಕ್ಕಿಂತ ಎಷ್ಟು ಗುಣಮಟ್ಟದ ಕೆಲಸ ಮಾಡಿದ್ದೇವೆ ಎನ್ನುವುದೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಕಂಪನಿ ನಮ್ಮ ಉದ್ಯೋಗಿಗಳಿಗೆ ಸುಬ್ರಹ್ಮಣ್ಯನ್ ಅಂಥವರ ಹೇಳಿಕೆಯನ್ನು ಸಮರ್ಥಿಸಿ ಕೆಲಸ ಮಾಡಲು ಹೇಳುವುದಿಲ್ಲ ಎಂದು ಹೇಳಿದ್ದಾರೆ.

ವಾರದಲ್ಲಿ 90 ಗಂಟೆ ಕೆಲಸ ಮಾಡುವುದು ಸಾಧ್ಯವೇ ಇಲ್ಲ. ಅದೂ ಸದ್ಯದ ಪರಿಸ್ಥಿತಿಯಲ್ಲಿ. ದೇಶದ ಕಾರ್ಪೋರೇಟ್ ವಲಯ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಯುವಕ–ಯುವತಿಯರಿಗೆ ಸಾಕಷ್ಟು ಉದ್ಯೋಗವಕಾಶಗಳು ಸಿಗುತ್ತಿವೆ. ಅವರಿಗೆ ಉದ್ಯೋಗ ಒಂದೇ ಎಲ್ಲವೂ ಅಲ್ಲ. ಅವರ ಅಭಿರುಚಿಗಳೂ ಹೆಚ್ಚಿವೆ. ಅಂಥವುಗಳನ್ನು ಗೌರವಿಸುತ್ತಾ ನಾವು ಅವರಿಂದ ‘ಕ್ವಾಲಿಟಿ’ ಕೆಲಸ ತೆಗೆಯಬೇಕಿದೆ ಎಂದು ಹೇಳಿದ್ದಾರೆ.

ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿ ಇರುವವರಿಂದ ಸಹಜವಾಗಿ ಕೆಲಸದ ಕ್ವಾಲಿಟಿ ಹೆಚ್ಚಿರುತ್ತದೆ. ಅವರು ಖುಷಿಯಿಂದಲೇ ಕೆಲಸ ಮಾಡುತ್ತಾರೆ. ಅದರಿಂದ ಅವರಿಗೂ ಲಾಭ, ಕಂಪನಿಗೂ ಲಾಭ. ಒತ್ತಾಯಪೂರ್ವಕವಾಗಿ ಕೆಲಸದ ಅವಧಿ ಹೆಚ್ಚು ಮಾಡುವುದರಿಂದ ಏನೂ ಸಾಧ್ಯವಿಲ್ಲ ಎಂದು ನಳಿನ್ ಪುನರುಚ್ಚಿಸಿದ್ದಾರೆ.

ಭಾರತ್ ಪೇ ಭಾರತದ ಒಂದು ಪ್ರಮುಖ ಫಿನ್ ಟೆಕ್ ಕಂಪನಿಯಾಗಿದೆ.

ಸದ್ಯ ಸುಬ್ರಹ್ಮಣ್ಯನ್ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಇನ್ಫಿ ನಾರಾಯಾಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆ ಪರ ವಿರೋಧ ಹೇಳಿಕೆಗಳಿಗೆ ಎಡೆ ಮಾಡಿಕೊಟ್ಟಿತ್ತು.
.ಎಷ್ಟೊತ್ತು ಹೆಂಡತಿ ಮುಖ ನೋಡ್ತೀರಿ; 90 ಗಂಟೆ ಕೆಲಸ ಮಾಡಿ: ಸುಬ್ರಹ್ಮಣ್ಯನ್.ಸಂಪಾದಕೀಯ Podcast | ಕೆಲಸದ ಅವಧಿ ಹೆಚ್ಚಳ ಹೇಳಿಕೆ: ಅಸಂಗತ, ದಮನಕಾರಿ ನಿಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.