ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬಾನಿ ಕುಟುಂಬದಿಂದ ಪಾಲ್ಘರ್‌ನಲ್ಲಿ ಸಾಮೂಹಿಕ ವಿವಾಹ

Published 2 ಜುಲೈ 2024, 16:21 IST
Last Updated 2 ಜುಲೈ 2024, 16:21 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ಮುಕೇಶ್– ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಇದೇ 12ರಂದು ನಡೆಯಲಿದೆ.

ಇದರ ಅಂಗವಾಗಿ ಅಂಬಾನಿ ಕುಟುಂಬದಿಂದ ಮಹಾರಾಷ್ಟ್ರದ ಪಾಲ್ಘರ್ ಪ್ರದೇಶದಲ್ಲಿ ಇರುವ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ಆರ್ಥಿಕವಾಗಿ ಹಿಂದುಳಿದ ಐವತ್ತಕ್ಕೂ ಹೆಚ್ಚು ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಂಪತಿಯ ಕುಟುಂಬದ ಪರವಾಗಿ ಸುಮಾರು 800 ಮಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನೀತಾ ಮತ್ತು ಮುಕೇಶ್ ಅವರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಪಾಲ್ಗೊಂಡಿದ್ದರು.

ಪ್ರತಿ ಜೋಡಿಗೂ ಮಂಗಳ ಸೂತ್ರ, ಉಂಗುರ, ಮೂಗುತಿ ಸೇರಿ ಚಿನ್ನಾಭರಣ ನೀಡಲಾಯಿತು. ಜೊತೆಗೆ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ನೀಡಲಾಯಿತು.

ಪ್ರತಿ ವಧುವಿಗೆ ₹1.01 ಲಕ್ಷ ನೀಡಲಾಯಿತು. ಪ್ರತಿ ದಂಪತಿಗೂ ಒಂದು ವರ್ಷಕ್ಕೆ ಸಾಕಾಗುವಷ್ಟು ದಿನಸಿ, ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT