ನವದೆಹಲಿ: ಅದಾನಿ ಸಮೂಹದ ಷೇರುಗಳ ಮೌಲ್ಯ ಶುಕ್ರವಾರ ಹಿಂಡನ್‌ಬರ್ಗ್ ವರದಿಗೆ ಪೂರ್ವದ ಸ್ಥಿತಿಗೆ ತಲುಪಿದೆ.

ಅದಾನಿ ಸಮೂಹವು ತಮ್ಮ ಕಂಪನಿಯ ಷೇರು ಮೌಲ್ಯದ ಮೇಲೆ ಅಕ್ರಮವಾಗಿ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ 2023ರ ಜನವರಿ 24ರಂದು ವರದಿ ಬಿಡುಗಡೆ ಮಾಡಿತ್ತು.
.ವಿಪ್ರೊ ಬದಿಗೊತ್ತಿ ಸೆನ್ಸೆಕ್ಸ್ ಸೇರ್ಪಡೆಯಾದ ಅದಾನಿ ಪೋರ್ಟ್ಸ್.
ವರದಿ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯದಲ್ಲಿ $150 ಬಿಲಿಯನ್ ಕುಸಿತ ಕಂಡಿತ್ತು. ಆದರೆ ಹಿಂಡನ್‌ಬರ್ಗ್ ವರದಿಯನ್ನು ಅದಾನಿ ಸಮೂಹ ತಳ್ಳಿ ಹಾಕಿತ್ತು.

ಶುಕ್ರವಾರ ಅದಾನಿ ಎಂಟ್ರಪ್ರೈಸಸ್ ಷೇರುಗಳು ಶೇ 1.91ರಷ್ಟು ಏರಿಕೆಯಾಗಿ ₹3,456.25ಕ್ಕೆ ತಲುಪಿತ್ತು. ಇದು 52 ವಾರಗಳಲ್ಲೇ ಅಧಿಕ. ದಿನದಂತ್ಯಕ್ಕೆ ಅದರ ಮೌಲ್ಯ ₹3,384.65 ಇತ್ತು.
.ಉತ್ಕೃಷ್ಟ ಎಂದು ಕಳಪೆ ಕಲ್ಲಿದ್ದಲು ಪೂರೈಕೆ: ಅದಾನಿ ಸಮೂಹದ ವಿರುದ್ಧ ಆರೋಪ.
2023ರ ಜನವರಿ 23ರಂದು ಅಂದರೆ ವರದಿ ಪ್ರಕಟಕ್ಕೂ ಹಿಂದಿನ ದಿನ ಅದಾನಿ ಎಂಟ್ರಪ್ರೈಸಸ್ ಷೇರು ಮೌಲ್ಯ ₹ 3,434.50 ಇತ್ತು. ಕಳೆದ ವರ್ಷ ಫೆಬ್ರುವರಿ 27ರಂದು ₹ 1,194.20 ಇತ್ತು.

ಅಲ್ಲಿಂದೀಚೆಗೆ ಷೇರು ಮೌಲ್ಯ ಶೇ 189ರಷ್ಟು ಹೆಚ್ಚಳಗೊಂಡು ಈಗಿನ ಸ್ಥಿತಿಗೆ ತಲುಪಿದೆ.
.ವಹಿವಾಟು ಉಲ್ಲಂಘನೆ ಆರೋಪ: ಅದಾನಿ ಸಮೂಹದ 7 ಕಂಪನಿಗೆ ನೋಟಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.