ನವದೆಹಲಿ: ಎರಡನೇ ದಿನದ ವಹಿವಾಟಿನಲ್ಲೂ ಅದಾನಿ ಸಮೂಹದ 10 ಕಂಪನಿಗಳ ಪೈಕಿ 7 ಕಂಪನಿಗಳ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.
ಅದಾನಿ ವಿಲ್ಮರ್ (ಶೇ 2.37) ಅದಾನಿ ಎಂಟರ್‌ಪ್ರೈಸಸ್ (ಶೇ 1.92) ಅಂಬುಜಾ ಸಿಮೆಂಟ್ಸ್ (ಶೇ 1.86) ಅದಾನಿ ಪೋರ್ಟ್ಸ್ (ಶೇ 1.24) ಎಸಿಸಿ (ಶೇ 0.54) ಅದಾನಿ ಪವರ್ (ಶೇ 0.20) ಮತ್ತು ಎನ್‌ಡಿಟಿವಿ (ಶೇ 0.20) ಷೇರಿನ ಮೌಲ್ಯ ಕುಸಿದಿದೆ.
ಅದಾನಿ ಟೋಟಲ್ ಗ್ಯಾಸ್ (ಶೇ 1.94) ಅದಾನಿ ಗ್ರೀನ್ ಎನರ್ಜಿ (ಶೇ 1.38) ಅದಾನಿ ಎನರ್ಜಿ ಸಲ್ಯೂಷನ್ಸ್ (ಶೇ 0.70) ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಸೆಬಿಯ ಅಧ್ಯಕ್ಷೆ ಮತ್ತು ಅವರ ಪತಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿದೆ. ಹಾಗಾಗಿ ಸೋಮವಾರದ ವಹಿವಾಟಿನಲ್ಲಿ ಅದಾನಿ ಸಮೂಹದ 8 ಕಂಪನಿಗಳ ಷೇರಿನ ಮೌಲ್ಯವು ಇಳಿಕೆಯಾಗಿತ್ತು.