ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಗ್ರೀನ್‌ ಎನರ್ಜಿ ಲಾಭ ಇಳಿಕೆ

Published 3 ಮೇ 2024, 13:57 IST
Last Updated 3 ಮೇ 2024, 13:57 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನ (ಎಜಿಇಎಲ್‌) ನಿವ್ವಳ ಲಾಭದಲ್ಲಿ ಶೇ 39ರಷ್ಟು ಇಳಿಕೆಯಾಗಿದೆ. 

2022–23ರ ಇದೇ ಅವಧಿಯಲ್ಲಿ ₹507 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹310 ಕೋಟಿ ‌ಗಳಿಸಿದೆ. ವೆಚ್ಚ ಹೆಚ್ಚಳದಿಂದಾಗಿ ಲಾಭದ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ಒಟ್ಟು ವರಮಾನವು ₹2,977 ಕೋಟಿಯಿಂದ ₹2,806 ಕೋಟಿಗೆ ಇಳಿದಿದೆ. ವೆಚ್ಚವು ₹2,053 ಕೋಟಿಯಿಂದ ₹2,379 ಕೋಟಿಗೆ ಏರಿಕೆಯಾಗಿದೆ.

ಕಂಪನಿಯ ಕಾರ್ಯಾಚರಣೆ ಸಾಮರ್ಥ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 35ರಷ್ಟು ಏರಿಕೆಯಾಗಿದ್ದು, 10,934 ಮೆಗಾವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದಿಸಿದೆ. ಈ ಮೂಲಕ ಎಜಿಇಎಲ್‌ 10 ಸಾವಿರ ಮೆಗಾವಾಟ್‌ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದಿಸಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT