ಶನಿವಾರ, ಸೆಪ್ಟೆಂಬರ್ 18, 2021
30 °C

ಹುದ್ದೆ ತ್ಯಜಿಸಲಿರುವ ಆದಿ ಗೋದ್ರೆಜ್

ಪಿಟಿಐ Updated:

ಅಕ್ಷರ ಗಾತ್ರ : | |

ಆದಿ ಗೋದ್ರೆಜ್

ನವದೆಹಲಿ: ಗೋದ್ರೆಜ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಜಿಐಎಲ್‌) ಅಧ್ಯಕ್ಷ ಸ್ಥಾನ ಹಾಗೂ ಆಡಳಿತ ಮಂಡಳಿಯಲ್ಲಿನ ಸ್ಥಾನವನ್ನು ಆದಿ ಗೋದ್ರೆಜ್ ಅವರು ತ್ಯಜಿಸಲಿದ್ದಾರೆ. ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಈ ಸ್ಥಾನಗಳನ್ನು ಅವರು ತಮ್ಮ ಕಿರಿಯ ಸಹೋದರ ನಾದಿರ್ ಗೋದ್ರೆಜ್ ಅವರಿಗೆ ಹಸ್ತಾಂತರ ಮಾಡಲಿದ್ದಾರೆ.

79 ವರ್ಷ ವಯಸ್ಸಿನ ಆದಿ ಗೋದ್ರೆಜ್ ಅವರು ಗೋದ್ರೆಜ್ ಸಮೂಹದ ಅಧ್ಯಕ್ಷರಾಗಿ, ಜಿಐಎಲ್‌ನ ಗೌರವಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ನಾದಿರ್ ಗೋದ್ರೆಜ್ ಅವರು ಈಗ ಜಿಐಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಆದಿ ಗೋದ್ರೆಜ್ ಅವರು ನಾಲ್ಕು ದಶಕಗಳಿಂದ ಜಿಐಎಲ್‌ನಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು