ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ ಸಾಲ ಹೆಚ್ಚಳ

Last Updated 5 ಫೆಬ್ರುವರಿ 2020, 16:48 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾದ ಸಾಲವು ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಕಡಿಮೆ ಬೆಲೆಯ ವಿಮಾನಯಾನ ಕಂಪನಿಗಳ ಪೈಪೋಟಿ, ಗರಿಷ್ಠ ಬಡ್ಡಿದರ ಮತ್ತು ಕಾರ್ಯಾಚರಣಾ ವೆಚ್ಚದಿಂದಾಗಿ ಸಾಲ ಹೆಚ್ಚಾಗುತ್ತಿದೆ ಎಂದು ನಾಗರೀಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

2017–18ರಲ್ಲಿ ₹ 55,308 ಕೋಟಿ ಇದ್ದ ಸಾಲದ ಮೊತ್ತ 2018–19ರಲ್ಲಿ ₹ 58,255 ಕೋಟಿಗೆ ಏರಿಕೆಯಾಗಿದೆ.

ಸಹಕಾರಿ ಬ್ಯಾಂಕ್‌ ಬಲವರ್ಧನೆಗೆ ಕ್ರಮ:ಸಹಕಾರಿ ಬ್ಯಾಂಕ್‌ಗಳ ಬಲವರ್ಧನೆಗಾಗಿ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ಅರ್‌ಬಿಐನ ಬ್ಯಾಂಕಿಂಗ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು. ಆದರೆ, ಆಡಳಿತಾತ್ಮಕ ವಿಷಯಗಳನ್ನು ರಿಜಿಸ್ಟ್ರಾರ್‌ ಆಫ್‌ ಕೊ–ಆಪರೇಟೀವ್‌ ನೋಡಿಕೊಳ್ಳಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ವಾಣಿಜ್ಯ ಬ್ಯಾಂಕ್‌ಗಳಂತೆಯೇ, ಸಹಕಾರಿ ಬ್ಯಾಂಕ್‌ಗಳಿಗೂ ಸಿಇಒ ನೇಮಕಾರಿಯಲ್ಲಿ ಕೆಲವು ಅರ್ಹತೆಗಳನ್ನು ನಿಗದಿಪಡಿಸಲಾಗುವುದು. ನೇಮಕ ಮಾಡುವುದಕ್ಕೂ ಮುನ್ನ ಆರ್‌ಬಿಐನ ಅನುಮತಿಯನ್ನೂ ಕೇಳಾಗುವುದು ಎಂದು ಹೇಳಿದ್ದಾರೆ.

ಆರ್‌ಬಿಐ ಮಾರ್ಗಸೂಚಿಯ ಅನ್ವಯ ಲೆಕ್ಕಪತ್ರ ಪರಿಶೀಲನೆ ನಡೆಯಲಿದೆ. ಸಂದರ್ಭ ಎದುರಾದರೆ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ಆರ್‌ಬಿಐ ರದ್ದುಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT