ನವದೆಹಲಿ : ಏರ್ ಇಂಡಿಯಾ ಕಂಪನಿಯು ವೈಮಾನಿಕ ಹಾರಾಟದ ಭಾಗವಾಗಿರದ ಸಿಬ್ಬಂದಿಗೆ (ನಾನ್–ಫ್ಲೈಯಿಂಗ್ ಸ್ಟಾಫ್) ಸ್ವಯಂ ನಿವೃತ್ತಿ ಯೋಜನೆ ಪ್ರಕಟಿಸಿದೆ. ಏರ್ ಇಂಡಿಯಾ ಸ್ವಾಧೀನ ಬಳಿಕ ಟಾಟಾ ಸಮೂಹವು ವಿಆರ್‌ಎಸ್ ಆಯ್ಕೆ ನೀಡುತ್ತಿರುವುದು ಇದು ಎರಡನೇ ಬಾರಿ. 2022ರ ಜೂನ್‌ನಲ್ಲಿ ಮೊದಲ ಹಂತದ ವಿಆರ್‌ಎಸ್ ಯೋಜನೆ ನೀಡಿತ್ತು.
40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕಾಯಂ ಆಗಿರುವ ಜನರಲ್ ಕೇಡರ್‌ನ ಅಧಿಕಾರಿಗಳು ಕನಿಷ್ಠ ಸತತ 5 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದರೆ ಅಂತಹ ಸಿಬ್ಬಂದಿಗೆ ಈ ನಿವೃತ್ತಿ ಯೋಜನೆ ಅನ್ವಯಿಸಲಿದೆ ಎಂದು ಕಂಪನಿ ಹೇಳಿದೆ. ಗುಮಾಸ್ತ ಮತ್ತು ಕೌಶಲ ಇಲ್ಲದ ನೌಕರರ ವಿಭಾಗದಲ್ಲಿ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿರುವವರು ಸಹ ಇದಕ್ಕೆ ಅರ್ಹರಾಗುತ್ತಾರೆ.
ಏಪ್ರಿಲ್ 30ರೊಳಗೆ ಸ್ವಯಂ ನಿವೃತ್ತಿ ಆಯ್ಕೆ ಮಾಡಿಕೊಳ್ಳುವವರಿಗೆ ಒಂದು ಬಾರಿಯ ಪ್ರಯೋಜನದ ರೂಪದಲ್ಲಿ ಎಕ್ಸ್–ಗ್ರೇಶಿಯಾ ನೀಡಲಾಗುವುದು ಎಂದು ಕಂಪನಿಯು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸುರೇಶ್ ದತ್ ತ್ರಿಪಾಟಿ ತಿಳಿಸಿದ್ದಾರೆ. ಮಾರ್ಚ್ 31ರವರೆಗೆ ಯೋಜನೆ ಆಯ್ಕೆ ಮಾಡಿಕೊಂಡವರಿಗೆ ಎಕ್ಸ್–ಗ್ರೇಶಿಯಾ ಮೊತ್ತದ ಮೇಲೆ ₹ 1 ಲಕ್ಷ ನೀಡಲಾಗುವುದು ಎಂದು ಕಂಪನಿಯ ಸಿಬ್ಬಂದಿಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ 2,100 ಸಿಬ್ಬಂದಿಯು ಈ ಯೋಜನೆಗೆ ಅರ್ಹರಾಗಿದ್ದಾರೆ. ಸದ್ಯ ವಿಮಾನಯಾನ ಕಂಪನಿಯ ಒಟ್ಟು ಸಿಬ್ಬಂದಿ ಸಂಖ್ಯೆ 11 ಸಾವಿರ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.