ಗುರುವಾರ , ಸೆಪ್ಟೆಂಬರ್ 23, 2021
24 °C

ದುಬಾರಿ ಆಗಲಿದೆ ವಿಮಾನ ಪ್ರಯಾಣ ದರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶಿ ವಿಮಾನ ಪ್ರಯಾಣ ದರವು ದುಬಾರಿ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಕನಿಷ್ಠ ಹಾಗೂ ಗರಿಷ್ಠ ದರವನ್ನು ಕ್ರಮವಾಗಿ ಶೇಕಡ 9.83 ಮತ್ತು ಶೇಕಡ 12.82ರಷ್ಟು ಹೆಚ್ಚಿಸಿದೆ.

2020ರಲ್ಲಿ ಎರಡು ತಿಂಗಳ ಲಾಕ್‌ಡೌನ್‌ ನಂತರ, ಮೇ 25ರಂದು ಕನಿಷ್ಠ ಮತ್ತು ಗರಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರವು ನಿಗದಿ ಮಾಡಿತ್ತು. ವಿಮಾನದ ಹಾರಾಟ ಅವಧಿಯನ್ನು ಆಧರಿಸಿ ಇದನ್ನು ನಿಗದಿ ಮಾಡಲಾಗಿತ್ತು. ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ ವಿಮಾನಯಾನ ಕಂಪನಿಗಳಿಗೆ ನೆರವಾಗುವ ಉದ್ದೇಶದಿಂದ ಬೆಲೆ ನಿಗದಿ ಮಾಡಲಾಗಿತ್ತು.

40 ನಿಮಿಷಗಳಿಗಿಂತ ಕಡಿಮೆ ಅವಧಿಯ ವಿಮಾನ ಪ್ರಯಾಣಕ್ಕೆ ಕೇಂದ್ರವು ₹ 2,900 ಕನಿಷ್ಠ ಬೆಲೆ, ₹ 8,800 ಗರಿಷ್ಠ ಬೆಲೆ ನಿಗದಿ ಮಾಡಿ ಆಗಸ್ಟ್‌ 12ರಂದು ಆದೇಶ ಹೊರಡಿಸಿದೆ. ಬೇರೆ ಬೇರೆ ಅವಧಿಯ ವಿಮಾನಯಾನ ದರಗಳನ್ನು ಕೂಡ ಕೇಂದ್ರವು ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು