ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್‌ 5ಜಿ ಪ್ಲಸ್ ಆರಂಭ

Last Updated 6 ಅಕ್ಟೋಬರ್ 2022, 20:52 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಆರಂಭ ಆಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌, ಸಿಲಿಗುರಿ, ನಾಗಪುರ ಮತ್ತು ವಾರಾಣಸಿ ನಗರ
ಗಳಲ್ಲಿ ಗ್ರಾಹಕರು ಹಂತ ಹಂತವಾಗಿ ಆಧುನಿಕ 5ಜಿ ಪ್ಲಸ್‌ ಸೇವೆಗಳನ್ನು ಪಡೆಯಲಿದ್ದಾರೆ. ಗ್ರಾಹಕರು ತಮ್ಮ ಪ್ರಸ್ತುತ ಡೇಟಾ ಪ್ಲಾನ್‌ಗಳಲ್ಲಿಯೇ ಅತ್ಯಂತ ವೇಗದ 5ಜಿ ಪ್ಲಸ್‌ ಸೇವೆಗಳನ್ನು ಆನಂದಿಸಬಹುದು ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕೇಂದ್ರ

ಮುಂಬೈ: ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಕೇಂದ್ರ ಸ್ಥಾಪಿಸಲು ₹984 ಕೋಟಿ ಹೂಡಿಕೆ ಮಾಡುವುದಾಗಿ ವಾಹನ ಬಿಡಿಭಾಗ ತಯಾರಿಸುವ ಕೆನಡಾದ ಮ್ಯಾಗ್ನ ಕಂಪನಿ ಗುರುವಾರ ತಿಳಿಸಿದೆ.

2.40 ಲಕ್ಷ ಚದರ ಅಡಿಯಲ್ಲಿ ಎಂಜಿನಿಯರಿಂಗ್ ಕೇಂದ್ರ ಇರಲಿದೆ, ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT