ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರದಿಂದ ₹ 49ಕ್ಕೆ ಬದಲಾಗಿ ₹ 79ರ ರೀಚಾರ್ಜ್‌ ಪ್ಲಾನ್‌: ಏರ್‌ಟೆಲ್‌

Last Updated 28 ಜುಲೈ 2021, 12:00 IST
ಅಕ್ಷರ ಗಾತ್ರ

ನವದೆಹಲಿ: ಏರ್‌ಟೆಲ್‌ ಕಂಪನಿಯು ತನ್ನ ಆರಂಭಿಕ ಹಂತದ ಪ್ರೀಪೇಯ್ಡ್‌ ಯೋಜನೆಯ ಬೆಲೆಯನ್ನು ಶೇಕಡ 60ರಷ್ಟು ಹೆಚ್ಚಿಸಿದೆ. ಇದು ಗುರುವಾರದಿಂದ ಜಾರಿಗೆ ಬರಲಿದೆ.

₹ 49ರಿಂದ ಆರಂಭ ಆಗುತ್ತಿದ್ದ ರೀಚಾರ್ಜ್‌ ಯೋಜನೆಗೆ ಬದಲಾಗಿ ₹ 79ರ ಸ್ಮಾರ್ಟ್‌ ರಿಚಾರ್ಜ್‌ ಯೋಜನೆಯನ್ನು ಕಂಪನಿ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಎರಡುಪಟ್ಟು ಡೇಟಾದೊಂದಿಗೆ ಗ್ರಾಹಕರಿಗೆ ಮೊದಲಿಗಿಂತ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ನಿಮಿಷಗಳು ಕರೆ ಮಾಡಲು ಲಭ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

₹ 79ರ ರೀಚಾರ್ಜ್‌ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಇರಲಿದ್ದು, ₹ 64ರ ಟಾಕ್‌ಟೈಮ್‌ ಮತ್ತು 200 ಎಂಬಿ ಡೇಟಾ ಸಿಗಲಿದೆ.

ಪ್ರತಿ ದೂರಸಂಪರ್ಕ ಕಂಪನಿಯೂ ಗ್ರಾಹಕನಿಂದ ಕಂಪನಿಗೆ ದೊರೆಯುವ ಆದಾಯ (ಎಆರ್‌ಪಿಯು) ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದ್ದು, ಆ ನಿಟ್ಟಿನಲ್ಲಿ ಏರ್‌ಟೆಲ್‌ ಈ ನಿರ್ಧಾರ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT