ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್ ಕನಿಷ್ಠ ರಿಚಾರ್ಜ್ ಪ್ಲ್ಯಾನ್ ದರ ₹99ರಿಂದ ₹155ಕ್ಕೆ ಏರಿಕೆ

ದೇಶದ ಎಲ್ಲೆಡೆ ಪರಿಷ್ಕೃತ ಪ್ಲ್ಯಾನ್ ಸಾಧ್ಯತೆ
Last Updated 22 ನವೆಂಬರ್ 2022, 5:27 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ವಲಯದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್, 28 ದಿನಗಳ ರಿಚಾರ್ಜ್ ಪ್ಲ್ಯಾನ್ ದರವನ್ನು ಪರಿಷ್ಕರಿಸಿದೆ.

28 ದಿನಗಳ ಪ್ಯಾಕ್ ಕನಿಷ್ಠ ಆರಂಭಿಕ ದರ ₹99 ಇದ್ದಿದ್ದು, 200 ಮೆಗಾಬೈಟ್ ಡೇಟಾ ಮತ್ತು ಅನಿಯಮಿತ ಕರೆಯ ಪ್ರಯೋಜನ ಒದಗಿಸುತ್ತಿತ್ತು. ಅದನ್ನು ಏರ್‌ಟೆಲ್ ಕಂಪನಿ ಪರಿಷ್ಕರಿಸಿದ್ದು, ₹155 ದರಕ್ಕೆ ಏರಿಕೆ ಮಾಡಿದೆ. ಜತೆಗೆ 1 ಜಿಬಿ ಡೇಟಾ, 300 ಎಸ್‌ಎಂಎಸ್ ಕೂಡ ಲಭ್ಯವಾಗಲಿದೆ.

ನೂತನ ಪ್ಲ್ಯಾನ್ ಹರಿಯಾಣ ಮತ್ತು ಒಡಿಶಾದಲ್ಲಿ ಜಾರಿಗೆ ಬಂದಿದೆ. ಮುಂದೆ ದೇಶದ ಎಲ್ಲ ಟೆಲಿಕಾಂ ಸರ್ಕಲ್‌ಗಳಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

ಅಂದರೆ, ಮುಂದೆ ಈಗಿರುವ ₹99 ದರದ ಕನಿಷ್ಠ ಪ್ಲ್ಯಾನ್ ದರವೂ ಬದಲಾಗಲಿದ್ದು, 28 ದಿನಕ್ಕೆ ಗ್ರಾಹಕರು ₹155 ಪಾವತಿಸಬೇಕಾಗುತ್ತದೆ.

ಆರಂಭಿಕ ಹಂತದಲ್ಲಿ ಪರೀಕ್ಷಾರ್ಥವಾಗಿ ಎರಡು ರಾಜ್ಯಗಳಲ್ಲಿ ಹೊಸ ಪ್ಲ್ಯಾನ್ ಬಿಡುಗಡೆಯಾಗಿದೆ. ಮುಂದೆ ಇತರ ರಾಜ್ಯಗಳಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT