ಶನಿವಾರ, ಸೆಪ್ಟೆಂಬರ್ 25, 2021
29 °C

46.1 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಏರ್‌ಟೆಲ್‌: ಟ್ರಾಯ್ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರ್ತಿ ಏರ್‌ಟೆಲ್‌ ಕಂಪನಿಯು ಮೇ ತಿಂಗಳಿನಲ್ಲಿ 46.1 ಲಕ್ಷ ಮೊಬೈಲ್‌ ಬಳಕೆದಾರರನ್ನು ಕಳೆದುಕೊಂಡಿದ್ದರೆ ರಿಲಯನ್ಸ್‌ ಜಿಯೊ ಕಂಪನಿಯು ಇದೇ ಅವಧಿಯಲ್ಲಿ 35.54 ಲಕ್ಷ ಬಳಕೆದಾರರನ್ನು ಗಳಿಸಿಕೊಂಡಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಈ ಮಾಹಿತಿ ನೀಡಿದೆ. ಮೇ ತಿಂಗಳಿನಲ್ಲಿ ಭಾರತದ ಮೊಬೈಲ್‌ ಮಾರುಕಟ್ಟೆಯು 62.7 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಇದರಿಂದ ಒಟ್ಟಾರೆ ಬಳಕೆದಾರರ ಸಂಖ್ಯೆಯು 117.6 ಕೋಟಿಗೆ ಇಳಿಕೆ ಕಂಡಿದೆ.

ಮೇ ತಿಂಗಳಿನಲ್ಲಿ ಜಿಯೊಗೆ ಹೊಸದಾಗಿ 35.54 ಲಕ್ಷ ಮೊಬೈಲ್‌ ಬಳಕೆದಾರರು ಸೇರ್ಪಡೆ ಆಗಿದ್ದು, ಒಟ್ಟು ಬಳಕೆದಾರರ ಸಂಖ್ಯೆ 43.12 ಕೋಟಿಗೆ ಏರಿಕೆ ಆಗಿದೆ.

ವೊಡಾಫೋನ್‌ ಐಡಿಯಾ ಕಂಪನಿಯು ಸಹ 42.8 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದ್ದು ಇದರ ಒಟ್ಟು ಬಳಕೆದಾರರ ಸಂಖ್ಯೆ 27.7 ಕೋಟಿಗೆ ತಗ್ಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು