ಗುರುವಾರ , ಆಗಸ್ಟ್ 22, 2019
26 °C

ಏರ್‌ಟೆಲ್‌ ನಷ್ಟ ₹ 2,866 ಕೋಟಿ

Published:
Updated:

ನವದೆಹಲಿ: ದೂರಸಂಪರ್ಕ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್‌, ಜೂನ್‌ ತ್ರೈಮಾಸಿಕದಲ್ಲಿ ₹ 2,866 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿದೆ.

14 ವರ್ಷಗಳಲ್ಲಿನ ಮೊದಲ ನಷ್ಟ ಇದಾಗಿದೆ. ಪ್ರತಿಸ್ಪರ್ಧಿ ಸಂಸ್ಥೆ ರಿಲಯನ್ಸ್ ಜಿಯೊಗೆ ತನ್ನ ಗ್ರಾಹಕರು ಮತ್ತು ವಹಿವಾಟನ್ನು ಕಳೆದುಕೊಂಡಿರುವುದು ಮತ್ತು ತ್ರಿಜಿ ಸಂಪರ್ಕ ಸಾಧನಗಳ ಸವಕಳಿ ವೆಚ್ಚ ಹೆಚ್ಚಿರುವುದರಿಂದ ನಷ್ಟ ಉಂಟಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಂಸ್ಥೆಯು ₹ 97 ಕೋಟಿಗಳ ನಿವ್ವಳ ಲಾಭ ಗಳಿಸಿತ್ತು.

ಸುನೀಲ್‌ ಮಿತ್ತಲ್‌ ಒಡೆತನದ ಕಂಪನಿಯ ವರಮಾನವು ಮೊದಲ ತ್ರೈಮಾಸಿಕದಲ್ಲಿ ಶೇ 4.7ರಷ್ಟು ಹೆಚ್ಚಾಗಿ ₹ 20,738 ಕೋಟಿಗೆ ತಲುಪಿದೆ.

ದೇಶದಲ್ಲಿನ ಮೊಬೈಲ್‌ ಸೇವೆಯ ವರಮಾನವು ಶೇ 4ರಷ್ಟು ಏರಿಕೆ ಕಂಡು ₹ 10,724 ಕೋಟಿಗೆ ತಲುಪಿದೆ.

Post Comments (+)