ನವದೆಹಲಿ: ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರ್ತಿ ಏರ್ಟೆಲ್ ಕಂಪನಿಯ ನಿವ್ವಳ ಲಾಭವು ಶೇ 55ರಷ್ಟು ಕಡಿಮೆ ಆಗಿ ₹6,630 ಕೋಟಿಗೆ ತಲುಪಿದೆ. ಸಂಪರ್ಕ ಜಾಲದ ನಿರ್ವಹಣಾ ವೆಚ್ಚ ಹೆಚ್ಚಳ, ಶಾಸನಾತ್ಮಕ ಶುಲ್ಕಗಳು, ನೌಕರರಿಗೆ ಸಂಬಂಧಿಸಿದ ವೆಚ್ಚಗಳು ಇದಕ್ಕೆ ಮುಖ್ಯ ಕಾರಣವಾಗಿವೆ.

ಕಂಪನಿಯ ಬಂಡವಾಳ ವೆಚ್ಚಗಳು ಈ ಅವಧಿಯಲ್ಲಿ ಶೇ 28ರಷ್ಟು ಹೆಚ್ಚಾಗಿ ₹11,787 ಕೋಟಿಗೆ ತಲುಪಿವೆ.

ದೂರಸಂಪರ್ಕ ವಲಯದಲ್ಲಿ ದೇಶದ ಎರಡನೆಯ ಅತಿದೊಡ್ಡ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ ಈ ಅವಧಿಯಲ್ಲಿ ₹53,982 ಕೋಟಿ ಕಾರ್ಯಾಚರಣೆ ವರಮಾನ ಗಳಿಸಿದೆ. ಇದು ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಂಪನಿ ಗಳಿಸಿದ್ದ ₹45,129 ಕೋಟಿಗೆ ಹೋಲಿಸಿದರೆ ಶೇ 19.6ರಷ್ಟು ಹೆಚ್ಚು.

ಕಂಪನಿಯು ಭಾರತದಲ್ಲಿ 41.38 ಕೋಟಿ ಗ್ರಾಹಕರನ್ನು, ಆಫ್ರಿಕಾದಲ್ಲಿ 17.93 ಕೋಟಿ ಗ್ರಾಹಕರನ್ನು ಹೊಂದಿದೆ. ಭಾರತದ ಪ್ರತಿ ಗ್ರಾಹಕನಿಂದ ಕಂಪನಿ ಪಡೆಯುವ ವರಮಾನದ ಮೊತ್ತವು ₹259ಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.