ಬೆಂಗಳೂರು: ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಡಿಜಿಟಲ್ ಚಿನ್ನದ ಉಳಿತಾಯ ಉತ್ತೇಜಿಸಲು ಪೇಟಿಎಂನಿಂದ ‘ಗೋಲ್ಡನ್ ರಶ್’ ಅಭಿಯಾನ ಪ್ರಾರಂಭಿಸಲಾಗಿದೆ.

ಪೇಟಿಎಂನಲ್ಲಿ ₹500 ಅಥವಾ ಹೆಚ್ಚು ಮೊತ್ತವನ್ನು ಚಿನ್ನದಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ರಿವಾರ್ಡ್ ಪಾಯಿಂಟ್ ನೀಡಲಾಗುತ್ತದೆ. ಪ್ರತಿ ಖರೀದಿಯಲ್ಲಿ ವಹಿವಾಟಿನ ಮೌಲ್ಯದ ಶೇ 5ರಷ್ಟನ್ನು ಪಾಯಿಂಟ್ ರೂಪದಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ಹೆಚ್ಚು ಪಾಯಿಂಟ್ ಪಡೆದವರು 100 ಗ್ರಾಂ ಚಿನ್ನದ ಬಹುಮಾನ ಗೆಲ್ಲುವ ಅವಕಾಶ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

ಪೇಟಿಎಂ 24 ಕ್ಯಾರೆಟ್ ಚಿನ್ನದ ಮೇಲೆ ಹೂಡಿಕೆಯ ಆಯ್ಕೆ ನೀಡುತ್ತದೆ. ಪೇಟಿಎಂ ಗೋಲ್ಡ್ ಮೂಲಕ ಬಳಕೆದಾರರು ಕೇವಲ ₹9 ರಿಂದ ಡೇಲಿ ಗೋಲ್ಡ್ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಪ್ರಾರಂಭಿಸಬಹುದು ಎಂದು ತಿಳಿಸಿದೆ.

ಇದು ಸಣ್ಣ ಹೂಡಿಕೆಗಳ ಮೂಲಕ ಕಾಲಕ್ರಮೇಣ ದೊಡ್ಡ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ನೈಜ ಸಮಯದ ಬೆಲೆ ನಿಗದಿ, ಸುರಕ್ಷಿತ ಸಂಗ್ರಹಣೆ ಮತ್ತು ಹೂಡಿಕೆ ಆಯ್ಕೆ, ಭವಿಷ್ಯದ ಅಗತ್ಯತೆ, ಹಬ್ಬದ ಉಡುಗೊರೆ ಅಥವಾ ದೀರ್ಘಕಾಲಿಕ ಆರ್ಥಿಕ ಸುರಕ್ಷತೆಗೆ ಉತ್ತಮ ಆಯ್ಕೆ ಆಗಿದೆ ಎಂದು ತಿಳಿಸಿದೆ.

ಹೂಡಿಕೆ ಮಾಡುವುದು ಹೇಗೆ?

ಪೇಟಿಎಂ ಆ್ಯಪ್ ಓಪನ್ ಮಾಡಿ ಸರ್ಚ್ ಬಾರ್ನಲ್ಲಿ ‘ಪೇಟಿಎಂ ಗೋಲ್ಡ್’ ಅಥವಾ ‘ಡೈಲಿ ಗೋಲ್ಡ್ ಎಸ್ಐಪಿ’ ಹುಡುಕಿ

‘ಬೈ ಮೋರ್’ ಕ್ಲಿಕ್ ಮಾಡಿ ಮತ್ತು ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ. ಕನಿಷ್ಠ ಹೂಡಿಕೆ ₹9ರಿಂದ ಆರಂಭವಾಗುತ್ತದೆ

ಆ್ಯಪ್ನಲ್ಲಿ ತೋರಿಸಲಾದ ನೈಜ ಸಮಯದ ಚಿನ್ನದ ಬೆಲೆ (ಜಿಎಸ್ಟಿ ಸೇರಿ) ಪರಿಶೀಲಿಸಿ. ಒಮ್ಮೆಮೆ ಅಥವಾ ದಿನದಂದು/ ವಾರದಂದು/ ತಿಂಗಳಿಗೊಮ್ಮೆ ಎಸ್ಐಪಿ ಆಯ್ಕೆ ಮಾಡಿ

ಯುಪಿಐ, ನೆಟ್ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿ. ಪಾವತಿ ಆದ ತಕ್ಷಣ ನಿಮ್ಮ ಚಿನ್ನವನ್ನು ವಿಮೆಗೊಂಡಿರುವ ವಾಲ್ಟ್ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ

ನಿಮ್ಮ ವ್ಯವಹಾರದ ದೃಢೀಕರಣವನ್ನು ಎಸ್ಎಂಎಸ್ ಮತ್ತು ಇ–ಮೇಲ್ ಮೂಲಕ ಪಡೆಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.