ಶುಕ್ರವಾರ, ಅಕ್ಟೋಬರ್ 18, 2019
23 °C

ಇದೇ 29ರಿಂದ ಅಮೆಜಾನ್‌ ಹಬ್ಬದ ಮಾರಾಟ

Published:
Updated:
Prajavani

ಬೆಂಗಳೂರು: ಇ–ಕಾಮರ್ಸ್‌ ದೈತ್ಯ ಸಂಸ್ಥೆ ‘ಅಮೆಜಾನ್‌ ಡಾಟ್‌ ಇನ್‌’, ಇದೇ 29ರಿಂದ 6 ದಿನಗಳ ಕಾಲ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ ಆಚರಿಸಲಿದ್ದು, ಖರೀದಿದಾರರಿಗೆ ಭರಪೂರ ರಿಯಾಯ್ತಿಗಳನ್ನು ಘೋಷಿಸಿದೆ.

Amazon.in ಅಂತರ್ಜಾಲ ತಾಣದಲ್ಲಿ ಜನಪ್ರಿಯ ಬ್ರ್ಯಾಂಡ್‌ನ ಉತ್ಪನ್ನಗಳ ವಿಶೇಷ ಮಾರಾಟ ಉತ್ಸವ ಇದಾಗಿದೆ. ಕಡಿಮೆ ಬೆಲೆ, ಆಕರ್ಷಕ ಕೊಡುಗೆ, ಗರಿಷ್ಠ ಪ್ರಮಾಣದ ರಿಯಾಯ್ತಿ, ಸುಲಭ ಕಂತು ಮತ್ತಿತರ ವಿಶೇಷ ಕೊಡುಗೆಗಳು ಲಭ್ಯ ಇರಲಿವೆ.

ಇದನ್ನೂ ಓದಿ: 29ರಿಂದ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್

ಸೆ. 29ರ ಮಧ್ಯರಾತ್ರಿಯಿಂದ ಅಕ್ಟೋಬರ್‌ 4ರ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿರುವ ಈ ಮಹಾ ಖರೀದಿ ಉತ್ಸವದಲ್ಲಿ ಭಾಗಿಯಾಗುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುವುದು. ಪ್ರೈಮ್‌ ಸದಸ್ಯರು ಸೆ. 28ರ ಮಧ್ಯಾಹ್ನ 12 ಗಂಟೆಯಿಂದಲೇ ಮಹಾ ಕೊಡುಗೆಗಳನ್ನು ಬಾಚಿಕೊಳ್ಳಬಹುದು.

ಸ್ಮಾರ್ಟ್‌ಫೋನ್‌: ಸ್ಮಾರ್ಟ್‌ಫೋನ್‌ ಮುಂಚೂಣಿ ಬ್ರ್ಯಾಂಡ್‌ಗಳಾದ ಒನ್‌ ಪ್ಲಸ್‌, ಸ್ಯಾಮ್ಸಂಗ್‌, ವಿವೊ ಮತ್ತಿತರ ಕಂಪನಿಗಳ 15 ಹೊಸ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯ ಇರಲಿವೆ.

ಗೃಹೋಪಯೋಗಿ ಸಲಕರಣೆ: ಗೃಹೋಪಯೋಗಿ ಸಲಕರಣೆ, ಅಡುಗೆ ಮನೆ ಪರಿಕರ ಮತ್ತು ಟಿವಿಗಳು   ಸುಲಭ ಮಾಸಿಕ ಕಂತು (ಇಎಂಐ), ಆಕರ್ಷಕ ವಿನಿಮಯ ಕೊಡುಗೆ ಮತ್ತು ಮನೆ ಬಾಗಿಲಿಗೆ ಉಚಿತ ಪೂರೈಕೆ ಸೌಲಭ್ಯಗಳ ಜತೆ ಲಭ್ಯ ಇರಲಿವೆ.

ಎಲೆಕ್ಟ್ರಾನಿಕ್ಸ್‌: ಮುಂಚೂಣಿ 200 ಬ್ರ್ಯಾಂಡ್‌ಗಳ ಎಲೆಕ್ಟ್ರಾನಿಕ್ಸ್‌ ಸಾಧನಗಳು, ಲ್ಯಾಪ್‌ಟಾಪ್‌, ಹೆಡ್‌ಫೋನ್‌ ಮುಂತಾದವು ಕಡಿಮೆ ಬೆಲೆಯಲ್ಲಿ ದೊರೆಯಲಿವೆ.

ಫ್ಯಾಷನ್‌: ದೇಶದ ಅತಿದೊಡ್ಡ ಅನ್‌ಲೈನ್‌ ಫ್ಯಾಷನ್‌ ಮಳಿಗೆಯಲ್ಲಿ 1,200ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಸಿದ್ಧ ಉಡುಪು, ಪಾದರಕ್ಷೆ, ಕೈಗಡಿಯಾರ, ಚಿನ್ನಾಭರಣ, ಬ್ಯಾಗ್‌, ಪೀಠೋಪಕರಣ ಸೌಂದರ್ಯ ಪ್ರಸಾಧನ ಮುಂತಾದ ವೈವಿಧ್ಯಮಯ ಉತ್ಪನ್ನಗಳು ಅಗ್ಗದ ದರದಲ್ಲಿ ದೊರೆಯಲಿವೆ.

ಪುಸ್ತಕ, ಆಟಿಕೆ: ಜನಪ್ರಿಯ ಪುಸ್ತಕ, ಚಿಣ್ಣರ ಆಟಿಕೆ, ಅಮೆಜಾನ್‌ ಇಕೊ, ಅಲೆಕ್ಸಾ ಖರೀದಿಯಲ್ಲಿಯೂ ಗ್ರಾಹಕರು ಗಮನಾರ್ಹ ಪ್ರಮಾಣದಲ್ಲಿ ಹಣ ಉಳಿಸಬಹುದು.

Post Comments (+)