ಹೈದರಾಬಾದ್ (ಪಿಟಿಐ): ಅಮೆಜಾನ್ ಕಂಪನಿಯು ‘ಅಮೆಜಾನ್ ಏರ್’ ಸೇವೆಗೆ ಸೋಮವಾರ ಚಾಲನೆ ನೀಡಿದೆ. ಇದು ಕಂಪನಿಯ ಸರಕು ಸಾಗಣೆ ಜಾಲವನ್ನು ಇನ್ನಷ್ಟು ವಿಸ್ತರಿಸಲಿದೆ, ಉತ್ಪನ್ನಗಳನ್ನು ಗ್ರಾಹಕರಿಗೆ ತ್ವರಿತವಾಗಿ ತಲುಪಿಸಲು ನೆರವು ನೀಡಲಿದೆ.

ಸರಕು ಸಾಗಣೆಗೆಂದೇ ವಿಮಾನ ಸೇವೆ ಶುರುಮಾಡಿರುವ ದೇಶದ ಮೊದಲ ಇ–ವಾಣಿಜ್ಯ ಕಂಪನಿ ತಾನು ಎಂದು ಅಮೆಜಾನ್ ಪ್ರಕಟಣೆ ತಿಳಿಸಿದೆ. ‘ಈಗ ಎರಡು ವಿಮಾನಗಳನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ವಿಮಾನದಲ್ಲಿ ಒಂದು ಬಾರಿಗೆ 20 ಸಾವಿರ ಉತ್ಪನ್ನಗಳನ್ನು ಸಾಗಿಸಬಹುದು’ ಎಂದು ಅಮೆಜಾನ್ ಅಧಿಕಾರಿ ಅಖಿಲ್ ಸಕ್ಸೇನಾ ಹೇಳಿದ್ದಾರೆ.

‘ನಾವು ಕ್ವಿಕ್‌ಜೆಟ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ವಿಮಾನಗಳನ್ನು ಲೀಸ್ ಆಧಾರದಲ್ಲಿ ತೆಗೆದುಕೊಂಡಿದ್ದೇವೆ. ಆ ಕಂಪನಿಯವರು ನಮಗಾಗಿ ವಿಮಾನ ನಿರ್ವಹಣೆ ಹಾಗೂ ವಿಮಾನದ ಹಾರಾಟ ಸೇವೆ ಒದಗಿಸಲಿದ್ದಾರೆ’ ಎಂದು ಸಕ್ಸೇನಾ ಹೇಳಿದ್ದಾರೆ. ಹೈದರಾಬಾದ್, ಬೆಂಗಳೂರು, ದೆಹಲಿ, ಮುಂಬೈಗೆ ಈ ಸರಕು ಸಾಗಣೆ ವಿಮಾನದ ಸೇವೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.