ಬುಧವಾರ, ಮೇ 18, 2022
23 °C

ಎಂಎಸ್ಎಂಇಗಳಿಗೆ ಕನ್ನಡ ಭಾಷೆಯ ಅನುಕೂಲ ಕಲ್ಪಿಸಿದ ಅಮೆಜಾನ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

amazon DH File

ಬೆಂಗಳೂರು: ದೇಶಾದ್ಯಂತ ಇರುವ ವಿವಿಧ ಎಂಎಸ್ಎಂಇ, ಸ್ಥಳೀಯ ಅಂಗಡಿಗಳು ಮತ್ತು ಮಾರಾಟಗಾರರಿಗೆ ಅನುಕೂಲವಾಗುವಂತೆ ಅಮೆಜಾನ್ ಪ್ರಾದೇಶಿಕ ಭಾಷಾ ಬೆಂಬಲವನ್ನು ನೀಡುತ್ತಿದೆ. ಅದರಂತೆ, ಕನ್ನಡದಲ್ಲಿ ಕೂಡ ಸೇವೆಯನ್ನು ಅಮೆಜಾನ್ ಪ್ರಾರಂಭಿಸಿದ್ದು, ಅಮೆಜಾನ್.ಇನ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾರಾಟಗಾರರು ನೋಂದಣಿ, ಉದ್ಯಮ ನಿರ್ವಹಣೆ ಮತ್ತು ಖಾತೆ ವಿವರವನ್ನು ಕನ್ನಡದಲ್ಲಿಯೇ ನಿರ್ವಹಿಸಬಹುದಾಗಿದೆ.

ಮೊದಲ ಬಾರಿಗೆ ಆನ್‌ಲೈನ್ ಉದ್ಯಮ ನೋಂದಣಿ, ಖಾತೆ ನಿರ್ವಹಣೆಯನ್ನು ಕನ್ನಡದಲ್ಲಿಯೇ ಒದಗಿಸುವುದರಿಂದ, ಅಮೆಜಾನ್ ಮೂಲಕ ವಿವಿಧ ಸರಕುಗಳನ್ನು ಮಾರಾಟ ಮಾಡುವ ಕನ್ನಡಿಗರಿಗೆ ಅನುಕೂಲವಾಗಲಿದೆ. ಜತೆಗೆ ಕನ್ನಡ ವಿಡಿಯೊ ಟ್ಯುಟೋರಿಯಲ್ ಮೂಲಕವೂ ಮಾರಾಟಗಾರರಿಗೆ ಅಮೆಜಾನ್ ನೆರವು ನೀಡಲಿದೆ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿ ಮತ್ತು ಮೈಸೂರು ಸಹಿತ ವಿವಿಧ ಪ್ರದೇಶಗಳಲ್ಲಿ 35,000ಕ್ಕೂ ಅಧಿಕ ಮಾರಾಟಗಾರರು ಅಮೆಜಾನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ ಹಿಂದಿ ಮತ್ತು ತಮಿಳು ಭಾಷಾ ಬೆಂಬಲವನ್ನು ಅಮೆಜಾನ್ ಒದಗಿಸಿದ್ದು, ಪ್ರಸ್ತುತ ಕನ್ನಡದಲ್ಲೂ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು