ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್ ಫಂಡ್ ಮತ್ತು ನಿಶ್ಚಿತ ಠೇವಣಿ ಸೇವೆ: ಅಮೆಜಾನ್‌ ಪೇ ಸಿದ್ಧತೆ

Last Updated 8 ಸೆಪ್ಟೆಂಬರ್ 2021, 13:12 IST
ಅಕ್ಷರ ಗಾತ್ರ

ನವದೆಹಲಿ: ಅಮೆಜಾನ್‌ ಪೇ ಇಂಡಿಯಾ ತನ್ನ ಗ್ರಾಹಕರಿಗೆಮ್ಯೂಚುವಲ್ ಫಂಡ್ ಮತ್ತು ನಿಶ್ಚಿತ ಠೇವಣಿಗಳಲ್ಲಿ (ಎಫ್.ಡಿ.) ಹೂಡಿಕೆ ಮಾಡುವ ಸೇವೆ ನೀಡಲು ಮುಂದಾಗಿದೆ. ತನ್ನ ಪ್ರತಿಸ್ಪರ್ಧಿ ಗೂಗಲ್ ಪೇ ಇದೇ ಬಗೆಯ ಸೌಲಭ್ಯಕ್ಕೆ ಚಾಲನೆ ನೀಡಿದ ಕೆಲವೇ ದಿನಗಳಲ್ಲಿ ಅಮೆಜಾನ್ ಈ ನಿರ್ಧಾರ ಮಾಡಿದೆ.

ಅಮೆಜಾನ್ ಪೇ ಇಂಡಿಯಾ, ಹೂಡಿಕೆ ಪ್ಲಾಟ್‌ಫಾರ್ಮ್ Kuvera.in (ಕುವೇರಾ) ಜೊತೆ ಒಪ್ಪಂದ ಮಾಡಿಕೊಳ್ಳುವುದಾಗಿ ಬುಧವಾರ ಘೋಷಿಸಿದೆ. ಗ್ರಾಹಕರು ಮ್ಯೂಚುವಲ್ ಫಂಡ್ ಮತ್ತು ಎಫ್‌.ಡಿ.ಗಳಲ್ಲಿ ಹೂಡಿಕೆ ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಠೇವಣಿ ಆಯ್ಕೆಯನ್ನು ನೀಡಲು ಗೂಗಲ್‌ ಪೇ ಕಂಪನಿಯು ಈಕ್ವಿಟಾಸ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಅಮೆಜಾನ್ ಪೇ ತನ್ನ ಮೂಲಕ ಗ್ರಾಹಕರು ಠೇವಣಿ ಇರಿಸಬಹುದಾದ ಬ್ಯಾಂಕುಗಳು ಯಾವುವು ಎಂಬ ವಿವರ ನೀಡಿಲ್ಲ.

ಗೂಗಲ್‌ ಪೇ ಮತ್ತು ಬ್ಯಾಂಕ್‌ ನಡುವಿನ ಒಪ್ಪಂದದಿಂದ ಹಣಕಾಸು ವ್ಯವಸ್ಥೆಯ ಮೇಲೆ ಆಗಲಿರುವ ಪರಿಣಾಮಗಳ ಕುರಿತು ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT