ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್-ಬ್ರೂಕ್‌ಫೀಲ್ಡ್‌ನಿಂದ ಚೆನ್ನೈನಲ್ಲಿ ಡೇಟಾ ಸೆಂಟರ್

ರಿಲಯನ್ಸ್‌ ಅಧ್ಯಕ್ಷ ಮುಖೇಶ್ ಅಂಬಾನಿ ಘೋಷಣೆ
Published 7 ಜನವರಿ 2024, 20:06 IST
Last Updated 7 ಜನವರಿ 2024, 20:06 IST
ಅಕ್ಷರ ಗಾತ್ರ

ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್, ಕೆನಡಾದ ಬ್ರೂಕ್‌ಫೀಲ್ಡ್ ಸಹಭಾಗಿತ್ವದಲ್ಲಿ ಚೆನ್ನೈನಲ್ಲಿ ಡೇಟಾ ಸೆಂಟರ್ (ದತ್ತಾಂಶ ಕೇಂದ್ರ) ಅನ್ನು ಮುಂದಿನ ವಾರ ಆರಂಭಿಸಲಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಭಾನುವಾರ ಹೇಳಿದ್ದಾರೆ.

ತಮಿಳುನಾಡು ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿ, ನವೀಕರಿಸಬಹುದಾದ ಇಂಧನ, ಗ್ರೀನ್‌ ಹೈಡ್ರೋಜನ್ ಮತ್ತು ರಾಜ್ಯದಲ್ಲಿ ಡೇಟಾ ಕೇಂದ್ರವನ್ನು ಸ್ಥಾಪಿಸಲು ಹೂಡಿಕೆ ಮಾಡಲಿದೆ ಎಂದು ಹೇಳಿದರು.

ಜಂಟಿ ಉದ್ಯಮವು ಮುಂದಿನ ವಾರ ಚೆನ್ನೈನಲ್ಲಿ 20 ಮೆಗಾವಾಟ್‌ ಡೇಟಾ ಸೆಂಟರ್ ಅನ್ನು ಪ್ರಾರಂಭಿಸಲಿದೆ ಮತ್ತು ಮತ್ತೊಂದು 40 ಮೆಗಾವಾಟ್‌ ಡೇಟಾ ಸೆಂಟರ್ ನಿರ್ಮಿಸಲು ಮುಂಬೈನಲ್ಲಿ 2.15 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ತಮಿಳುನಾಡು ಯಾವಾಗಲೂ ಶ್ರೀಮಂತವಾದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯ ನಾಡು ಎಂದು ಹೇಳಿದ ಅಂಬಾನಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ರಾಜ್ಯವು ದೇಶದ ಅತ್ಯಂತ ವ್ಯಾಪಾರಸ್ನೇಹಿ ರಾಜ್ಯಗಳಲ್ಲಿ ಒಂದಾಗಿದೆ. ತಮಿಳುನಾಡಿನ ಬೆಳವಣಿಗೆಯಲ್ಲಿ ರಿಲಯನ್ಸ್ ಪಾಲುದಾರಿಕೆ ಹೊಂದಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT