ನವದೆಹಲಿ: 2024–25ನೇ ಆರ್ಥಿಕ ವರ್ಷದಲ್ಲಿ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟವು (ಜಿಸಿಎಂಎಂಎಫ್) ₹65,911 ಕೋಟಿ ವಹಿವಾಟು ನಡೆಸಿದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ತಿಳಿಸಿದ್ದಾರೆ.

2023–24ರಲ್ಲಿ ₹59,259 ಕೋಟಿ ವಹಿವಾಟು ನಡೆಸಿತ್ತು. ಇದಕ್ಕೆ ಹೋಲಿಸಿದರೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದ್ದಾರೆ.

2024–25ರಲ್ಲಿ ಅಮೂಲ್ ಬ್ರ್ಯಾಂಡ್ನ ಒಟ್ಟು ಆದಾಯವು ₹90 ಸಾವಿರ ಕೋಟಿ ಆಗಿದೆ. 2023–24ರಲ್ಲಿ ₹80 ಸಾವಿರ ಕೋಟಿ ಆದಾಯ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 14ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಗುಜರಾತ್ನ 18,600 ಗ್ರಾಮಗಳಲ್ಲಿ ಒಕ್ಕೂಟವು ಕಾರ್ಯ ನಿರ್ವಹಿಸುತ್ತಿದ್ದು, 36 ಲಕ್ಷ ರೈತರು ಇದರಡಿ ಇದ್ದಾರೆ. ಒಟ್ಟು 18 ಹಾಲು ಒಕ್ಕೂಟಗಳಿವೆ. ಪ್ರತಿದಿನ 3 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.