ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Amul | ಲೀಟರ್ ಹಾಲಿಗೆ ₹2 ಏರಿಕೆ ಮಾಡಿದ ಅಮುಲ್: ಗುಜರಾತ್‌ಗೆ ಅನ್ವಯವಿಲ್ಲ

ಶುಕ್ರವಾರದಿಂದಲೇ ಹೊಸ ದರ ಜಾರಿ
Last Updated 3 ಫೆಬ್ರುವರಿ 2023, 6:40 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮುಲ್‌‘ ಬ್ರಾಂಡ್‌ನಡಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್‌ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟವು ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ.

ಶುಕ್ರವಾರದಿಂದಲೇ ಈ ದರ ಜಾರಿಗೆ ಬಂದಿದೆ. ಗುಜರಾತ್‌ ಹೊರತುಪಡಿಸಿ, ದೇಶದ ಉಳಿದ ಎಲ್ಲಾ ಭಾಗಗಳಿಗೂ ಹೊಸ ದರ ಅನ್ವಯವಾಗಲಿದೆ ಎಂದು ಅಮುಲ್‌ ಹೇಳಿದೆ.

‘ಗುಜರಾತ್‌ ಹೊರೆತುಪಡಿಸಿ ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸದ್ಯದ ಮಟ್ಟಿಗೆ ಗುಜರಾತ್‌ನಲ್ಲಿ ಯಾವುದೇ ದರ ವ್ಯತ್ಯಾಸವಾಗುವುದಿಲ್ಲ‘ ಎಂದು ಅಮುಲ್‌ನ ಎಂ.ಡಿ ಜಯೆನ್‌ ಮೆಹ್ತಾ ಹೇಳಿದ್ದಾರೆ.

ಹೊಸ ದರ ಜಾರಿಗೆ ಬಂದ ಬಳಿಕ ಅಮುಲ್‌ ತಾಜಾ ಹಾಲು ಲೀಟರ್‌ಗೆ ₹54, ಒಂದು ಲೀಟರ್‌ ಅಮುಲ್‌ ಗೋಲ್ಡ್ ಹಾಲಿಗೆ ₹66, ಒಂದು ಲೀಟರ್‌ ಅಮುಲ್‌ ಎ2 ಎಮ್ಮೆ ಹಾಲು ₹70 ವೆಚ್ಚವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT