ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಆ್ಯಪಲ್‌ನ ಮೊದಲ ಅಧಿಕೃತ ಮಳಿಗೆ ಮುಂಬೈನಲ್ಲಿ ನಾಳೆ ಆರಂಭ: ಏನು ವಿಶೇಷ?

Last Updated 17 ಏಪ್ರಿಲ್ 2023, 7:46 IST
ಅಕ್ಷರ ಗಾತ್ರ

ಮುಂಬೈ: ಭಾರತದ ಮೊದಲ ಆ್ಯಪಲ್‌ ಸ್ಟೋರ್‌ ‘ಆ್ಯಪಲ್ ಬಿಕೆಸಿ’ ಮುಂಬೈನಲ್ಲಿ ಮಂಗಳವಾರ (ಏ.18) ಆರಂಭವಾಗಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವರ್ಲ್ಡ್‌ ಡ್ರೈವ್‌ ಮಾಲ್‌ನಲ್ಲಿ ಈ ಸ್ಟೋರ್‌ ಪ್ರಾರಂಭವಾಗಲಿದೆ.

ಆ್ಯಪಲ್‌ ಕಂಪನಿ ಸಿಇಒ ಟಿಮ್ ಕುಕ್ ಈ ಮಳಿಗೆಯನ್ನು ಉದ್ಘಾಟನೆ ಮಾಡಲಿದ್ದಾರೆ.

‘ಆ್ಯಪಲ್‌ ಬಿಕೆಸಿ‘ ಎಂದು ಈ ಸ್ಟೋರ್‌ಗೆ ಹೆಸರಿಡಲಾಗಿದೆ. ಸ್ಟೋರ್‌ನ ವಿನ್ಯಾಸವು ಮುಂಬೈನ ಪ್ರಸಿದ್ಧ ‘ಕಪ್ಪು–ಹಳದಿ ಟಾಕ್ಸಿ‘ಯಿಂದ ಪ್ರೇರಣೆಗೊಂಡಿದೆ. ಅಲ್ಲದೇ ಪೂರ್ಣ ಸ್ಟೋರ್‌ ಅನ್ನು ಶೇ 100 ರಷ್ಟು ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣ ಮಾಡಲಾಗಿದೆ.

ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಸಲುವಾಗಿ ಅತ್ಯಾಧುನಿಕವಾಗಿ ಮಳಿಗೆಯನ್ನು ಡಿಸೈನ್‌ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ ‘ಹಲೋ ಮುಂಬೈ‘ ಎಂದು ಬರೆಯಲಾಗಿದೆ. ಮುಂಬೈ ರೈಸಿಂಗ್ ಕಾರ್ಯಕ್ರಮದ ಮೂಲಕ ಸ್ಟೋರ್ ತೆರೆದುಕೊಳ್ಳಲಿದೆ.

ವಿಶೇಷವೆಂದರೆ ಈ ಮಳಿಗೆಯಲ್ಲಿ 20 ಭಾಷೆ ಮಾತನಾಡುವ 100 ಜನ ಸೇವಾ ಪ್ರತಿನಿಧಿಗಳಿರಲಿದ್ದಾರೆ.

ಈ ಮಳಿಗೆಯಲ್ಲಿ ಭಾರತದಲ್ಲಿ ಆ್ಯಪಲ್‌ನ ಗಮನಾರ್ಹ ವ್ಯಾಪಾರ ವಿಸ್ತರಣೆಯನ್ನು ಸೂಚಿಸುತ್ತಿದ್ದು, ಗ್ರಾಹಕರಿಗೆ ಹೊಸತನ, ಅಸಾಧಾರಣ ಸೇವೆ, ಅನುಭವ ಪಡೆಯಲು ಮತ್ತು ಉತ್ಪನ್ನಗಳ ಖರೀದಿಗೆ ಅವಕಾಶ ಮಾಡಿಕೊಡಲಿದೆ.

ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ಅಧಿಕೃತ ಎರಡು ಸ್ಟೋರ್‌ಗಳನ್ನು ಪ್ರಾರಂಭಿಸುತ್ತಿದ್ದು ಏಪ್ರಿಲ್ 20 ರಂದು ದೆಹಲಿಯಲ್ಲಿ ಆ್ಯಪಲ್ ಸಾಕೇತ್ ಮಳಿಗೆ ಅನಾವರಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT