ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫೋನ್‌ 13 ಸರಣಿ: ಸೆ. 24ರಿಂದ ಲಭ್ಯ

Last Updated 15 ಸೆಪ್ಟೆಂಬರ್ 2021, 15:57 IST
ಅಕ್ಷರ ಗಾತ್ರ

ನವದೆಹಲಿ: ಆ್ಯಪಲ್ ಕಂಪನಿಯ ಹೊಸ ‘ಐಫೋನ್ 13’ ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸೆಪ್ಟೆಂಬರ್ 24ರಿಂದ ಲಭ್ಯವಾಗಲಿವೆ. ಬೆಲೆಯು ₹ 69,900ರಿಂದ ಆರಂಭವಾಗುತ್ತದೆ.

‘ಭಾರತ, ಕೆನಡಾ, ಚೀನಾ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ 30ಕ್ಕೂ ಅಧಿಕ ದೇಶಗಳಲ್ಲಿ ಐಫೋನ್ 13 ಪ್ರೊ ಮತ್ತು ಐಫೊನ್ 13 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳು ಸೆಪ್ಟೆಂಬರ್ 24ರಿಂದ ಲಭ್ಯವಿರಲಿವೆ’ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಆ್ಯಪಲ್‌ನ ಅಧಿಕೃತ ರಿಸೆಲ್ಲರ್ ಮತ್ತು ಆಯ್ದ ಮಳಿಗೆಗಳಲ್ಲಿಯೂ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ ಎಂದು ತಿಳಿಸಿದೆ.

ವೇಗದ ಕಾರ್ಯಾಚರಣೆ, ಉತ್ತಮ ಗುಣಮಟ್ಟದ ಕ್ಯಾಮೆರಾ, ದೀರ್ಘ ಬಾಳಿಕೆ, ದೊಡ್ಡ ಪರದೆ ಮತ್ತು ಅತ್ಯುತ್ತಮ ವಿನ್ಯಾಸಗಳನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ ಎಂದು ಕಂಪನಿಯ ಸಿಇಒ ಟಿಮ್ ಕುಕ್ ಅವರು ಹೇಳಿದ್ದಾರೆ.

ಐಪಾಡ್‌, ಐಪಾಡ್‌ ಮಿನಿ: 9ನೇ ಪೀಳಿಗೆಯ ಹೊಸ ಐಪಾಡ್‌ ಬೆಲೆ ₹ 30,900ರಿಂದ, ಐಪಾಡ್‌ ಮಿನಿ ಬೆಲೆ₹ 46,900ರಿಂದ ಆರಂಭವಾಗುತ್ತದೆ. ಇವೆರಡೂ ಸೆಪ್ಟೆಂಬರ್‌ 24ರಿಂದ ಖರೀದಿಗೆ ಲಭ್ಯವಾಗಲಿವೆ. ಆ್ಯಪಲ್‌ ವಾಚ್‌ ಸಿರೀಸ್‌ 7 ಅನ್ನು ಕಂಪ‍ನಿ ಪರಿಚಯಿಸಿದ್ದು ಯಾವಾಗ ಸಿಗಲಿದೆ ಎನ್ನುವುದನ್ನು ತಿಳಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT