ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಬಿಡಿಭಾಗ ಉದ್ಯಮದ ಕಾರ್ಯಾಚರಣೆ ಲಾಭ ಶೇ 70ರಷ್ಟು ಇಳಿಕೆ ಸಾಧ್ಯತೆ: ಐಸಿಆರ್‌ಎ

Last Updated 22 ಜೂನ್ 2021, 18:30 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಎರಡನೇ ಅಲೆಯಿಂದಾಗಿ ವಾಹನ ಬಿಡಿಭಾಗ ಉದ್ಯಮದ ಕಾರ್ಯಾಚರಣೆ ಲಾಭವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ 70ರಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಹೇಳಿದೆ.

ಈ ಅವಧಿಯಲ್ಲಿ ವರಮಾನ ನಷ್ಟವು ಶೇ 30ರಿಂದ ಶೇ 40ರಷ್ಟು ಇರುವ ಅಂದಾಜು ಮಾಡಲಾಗಿದೆ ಎಂದು ಹೇಳಿದೆ.

ಲಾಕ್‌ಡೌನ್‌ನಿಂದಾಗಿ ದೇಶಿ ಬೇಡಿಕೆಯು ಕುಸಿತ ಕಂಡಿದ್ದರೂ, ಕಳೆದ ಕೆಲವು ತಿಂಗಳುಗಳಲ್ಲಿ ರಫ್ತು ವ್ಯಾಪಾರವು ಉದ್ಯಮದ ರಕ್ಷಣೆಗೆ ಬಂದಿದೆ ಎಂದು ತಿಳಿಸಿದೆ.

ಅಲ್ಪಾವಧಿ ಸಮಸ್ಯೆಗಳ ಮಧ್ಯೆಯೂ ವಾಹನ ಬಿಡಿಭಾಗ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 20ರಿಂದ ಶೇ 23ರಷ್ಟು ವರಮಾನ ಪ್ರಗತಿ ಕಾಣಲಿದೆ. ಒಟ್ಟಾರೆ ಉದ್ಯಮದ ವರಮಾನವು ಹಿಂದಿನ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕಕ್ಕೆ ಹೋಲಿಸಿದರೆ ಬಹುತೇಕ ಎರಡುಪಟ್ಟು ಹೆಚ್ಚಿಗೆ ಇರಲಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT