ಶನಿವಾರ, ಸೆಪ್ಟೆಂಬರ್ 18, 2021
21 °C

ಖಾದ್ಯ ತೈಲ ಬೆಲೆ ಹೆಚ್ಚಳ ಪ್ರಮಾಣ ಶೇ 52!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಸರಾಸರಿ ಬೆಲೆಯು ಹಿಂದಿನ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಗರಿಷ್ಠ ಶೇಕಡ 52ರಷ್ಟು ಏರಿಕೆ ಆಗಿದೆ.

ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು, ‘ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಧಾನ್ಯಗಳು ಹಾಗೂ ಖಾದ್ಯ ತೈಲದ ಬೆಲೆಯಲ್ಲಿ ಏರಿಕೆ ಆಗುವುದನ್ನು ತಡೆಯಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

‘ಖಾದ್ಯ ತೈಲ ಬೆಲೆ ತಗ್ಗಿಸುವ ಉದ್ದೇಶದಿಂದ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ಜೂನ್‌ 30ರಿಂದ ಅನ್ವಯವಾಗುವಂತೆ ಶೇ 5ರಷ್ಟು ಕಡಿಮೆ ಮಾಡಲಾಗಿದೆ. ಈ ಕ್ರಮವು ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿ ಇರುತ್ತದೆ. ಸಂಸ್ಕರಿತ ತಾಳೆ ಎಣ್ಣೆ ಮೇಲಿನ ಸುಂಕ ಶೇ 45 ಇದ್ದಿದ್ದನ್ನು ಶೇ 37.5ಕ್ಕೆ ಇಳಿಕೆ ಮಾಡಲಾಗಿದೆ’ ಎಂದು ಚೌಬೆ ಅವರು ಹೇಳಿದ್ದಾರೆ.

ಭಾರತವು ತನ್ನಲ್ಲಿ ಬಳಕೆಯಾಗುವ ಖಾದ್ಯ ತೈಲದ ಪೈಕಿ ಶೇ 60ರಷ್ಟರಿಂದ ಶೇ 70ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ.

ಖಾದ್ಯತೈಲ; ಬೆಲೆ ಏರಿಕೆ (%)

ಶೇಂಗಾ ಎಣ್ಣೆ; 19.24

ಸಾಸಿವೆ ಎಣ್ಣೆ; 39.03

ಸೋಯಾ ಎಣ್ಣೆ; 48.07

ಸೂರ್ಯಕಾಂತಿ ಎಣ್ಣೆ; 51.62

ತಾಳೆ ಎಣ್ಣೆ; 44.42

(2020ರ ಜುಲೈನಲ್ಲಿದ್ದ ಇದ್ದ ಬೆಲೆಗೆ ಹೋಲಿಸಿದರೆ 2021ರ ಜುಲೈನಲ್ಲಿ ಆಗಿರುವ ಶೇಕಡಾವಾರು ಹೆಚ್ಚಳ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು