ಬಜಾಜ್ ಅಲಯನ್ಸ್ ಲೈಫ್‌ನಿಂದ ಹೊಸ ಯೋಜನೆ
ಬೆಂಗಳೂರು: ಬಜಾಜ್ ಅಲಯನ್ಸ್ ಲೈಫ್ ಕಂಪನಿಯು ‘ಬಜಾಜ್ ಅಲಯನ್ಸ್ ಲೈಫ್ ಗ್ಯಾರಂಟೀಡ್ ಪೆನ್ಶನ್ ಗೋಲ್’ ಎನ್ನುವ ವಾರ್ಷಿಕ ಪಿಂಚಣಿ ಯೋಜನೆ ಆರಂಭಿಸಿದೆ.
ವಿವಿಧ ರೀತಿಯ ಗ್ರಾಹಕರ ಪಿಂಚಣಿ ಅಗತ್ಯಗಳನ್ನು ಈಡೇರಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದು, ಒಂಭತ್ತು ಬಗೆಯ ವಾರ್ಷಿಕ ಪಿಂಚಣಿ ಆಯ್ಕೆಗಳನ್ನು ನೀಡಲಾಗಿದೆ. ಇದು ಪಾಲಿಸಿದಾರರಿಗೆ ನಿವೃತ್ತಿ ಸಮಯದಲ್ಲಿ ತಮ್ಮ ಪಿಂಚಣಿ ಮೊತ್ತವನ್ನು ಖಾತರಿಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಹೇಳಿದೆ.
ಪಾಲಿಸಿದಾರರ ಸಂಗಾತಿಗೆ ತನ್ನ ಜೀವಿತಾವಧಿವರೆಗೆ ನಿಶ್ಚಿತ ಆದಾಯ ಪಡೆಯುವುದನ್ನು ಮುಂದುವರಿಸುವ ಆಯ್ಕೆಯನ್ನೂ ಈ ಯೋಜನೆಯು ನೀಡುತ್ತದೆ. ಪ್ರೀಮಿಯಂ ಪಾವತಿ ಅವಧಿಯು 5ರಿಂದ 10 ವರ್ಷಗಳಾಗಿದ್ದು, ಒಂದೇ ಪ್ರೀಮಿಯಂ ಮೂಲಕ ಪಾವತಿಸುವ ಆಯ್ಕೆಯೂ ಲಭ್ಯವಿದೆ.
₹ 1,156 ಕೋಟಿ ಬೋನಸ್: ಬಜಾಜ್ ಅಲಯನ್ಸ್ ಲೈಫ್ ಕಂಪನಿಯು ತನ್ನ ಪಾಲಿಸಿದಾರರಿಗೆ ₹ 1,156 ಕೋಟಿ ಮೊತ್ತದ ಬೋನಸ್ ಘೋಷಿಸಿದೆ. ₹ 315 ಕೋಟಿ ಮೊತ್ತದ ಒಂದು ಅವಧಿಯ ವಿಶೇಷ ಬೋನಸ್ ಅನ್ನೂ ಇದು ಒಳಗೊಂಡಿದೆ. ಇದರಿಂದಾಗಿ 12 ಲಕ್ಷ ಪಾಲಿಸಿದಾರರಿಗೆ ಪ್ರಯೋಜನ ಆಗುವ ನಿರೀಕ್ಷೆ ಮಾಡಲಾಗಿದೆ. ಕಂಪನಿಯು ಸತತ 20ನೇ ವರ್ಷವೂ ತನ್ನ ಪಾಲಿಸಿದಾರರಿಗೆ ಬೋನಸ್ ಘೋಷಣೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.