ಬೆಂಗಳೂರು: ಬೆಂಗಳೂರು ಸುರಂಗ ರಸ್ತೆ ಮಾರ್ಗ ಯೋಜನೆ ಕಾಮಗಾರಿಗೆ ಕರೆಯಲಾಗಿದ್ದ ಬಿಡ್ನಲ್ಲಿ ಅದಾನಿ ಗ್ರೂಪ್ ಅತ್ಯಂತ ಕಡಿಮೆ ಮೊತ್ತವನ್ನು ನಮೂದಿಸಿದೆ. ಆದರೆ ಅಂದಾಜು ವೆಚ್ಚಕ್ಕಿಂತ ಶೇ 24 ರಷ್ಟು ಹೆಚ್ಚು ಮೊತ್ತ ನಮೂದಿಸಿರುವ ಕಾರಣಕ್ಕೆ, ಗುತ್ತಿಗೆ ಪ್ರಕ್ರಿಯೆ ವಿಳಂಬವಾಗಲಿದೆ.

ಸಿಲ್ಕ್ ಬೋರ್ಡ್ನಿಂದ ವಿಮಾನ ನಿಲ್ದಾಣ ರಸ್ತೆಯ ಎಸ್ಟೀಮ್ ಮಾಲ್ವರೆಗೆ ನಿರ್ಮಿಸಲಾಗುವ ಈ ಸುರಂಗ ಮಾರ್ಗ ಯೋಜನೆಯ ಅನುಷ್ಠಾನದ ಹೊಣೆಯನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ನಿಯಮಿತಕ್ಕೆ (ಬಿ–ಸ್ಮೈಲ್) ನೀಡಲಾಗಿದೆ.

ಈ ಯೋಜನೆಗೆ ಅದಾನಿ ಗ್ರೂಪ್, ದಿಲಿಪ್ ಬಿಲ್ಡ್ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್, ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್ವಿಎನ್ಎಲ್) ಬಿಡ್ ಸಲ್ಲಿಸಿದ್ದವು. ಬಿಡ್ದಾರರು ನಿರ್ಮಿಸಿದ್ದ ರಸ್ತೆ /ಸೇತುವೆಗಳು ಈಚಿನ ವರ್ಷಗಳಲ್ಲಿ ಕುಸಿದಿರಬಾರದು ಎಂಬ ಷರತ್ತನ್ನು ಬಿ–ಸ್ಮೈಲ್ ವಿಧಿಸಿತ್ತು. ಈ ಷರತ್ತಿನ ಕಾರಣಕ್ಕೆ, ವಿಶ್ವ ಸಮುದ್ರ ಎಂಜಿನಿಯರಿಂಗ್, ಆರ್ವಿಎನ್ಎಲ್ ಸಲ್ಲಿಸಿದ್ದ ಬಿಡ್ಗಳು ಅನರ್ಹಗೊಂಡವು ಎಂದು ಬಿ–ಸ್ಮೈಲ್ ಮೂಲಗಳು ಹೇಳಿವೆ.

16.57 ಕಿ.ಮೀ. ಉದ್ದದ ಸುರಂಗ ರಸ್ತೆ ಮಾರ್ಗ ಯೋಜನೆಗೆ ರಾಜ್ಯ ಸರ್ಕಾರವು ₹17,698 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಿತ್ತು. ಅದಾನಿ ಗ್ರೂಪ್ ಸಲ್ಲಿಸಿರುವ ಬಿಡ್ ಅತ್ಯಂತ ಕಡಿಮೆ ಮೊತ್ತದ್ದಾಗಿದ್ದರೂ (ಎಲ್–1), ಅದು ಅಂದಾಜು ವೆಚ್ಚಕ್ಕಿಂತ ಶೇ 24– 28 ರಷ್ಟು ಹೆಚ್ಚು. ವೆಚ್ಚ ಹೆಚ್ಚಳದ ಪ್ರಮಾಣ ಅಧಿಕವಾಗಿ ಇರುವ ಕಾರಣಕ್ಕೆ, ರಾಜ್ಯ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಸುರಂಗ ರಸ್ತೆ ಮಾರ್ಗವನ್ನು ನಿರ್ಮಾಣ– ನಿರ್ವಹಣೆ– ವರ್ಗಾವಣೆ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಸರ್ಕಾರವು ಶೇ 40ರಷ್ಟು ವೆಚ್ಚವನ್ನು ಭರಿಸಿದರೆ, ನಿರ್ಮಾಣ ಕಂಪನಿಯು ಶೇ 60 ರಷ್ಟು ವೆಚ್ಚವನ್ನು ಭರಿಸಬೇಕು.

‘ಇದು ಅತ್ಯಂತ ದುಬಾರಿ ವೆಚ್ಚದ ಯೋಜನೆ. ಬಡವರಿಗೆ ಇದರಿಂದ ಅನುಕೂಲವಿಲ್ಲ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.