ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bangla Unrest | ಟೊಮೆಟೊಗೆ ಪೆಟ್ಟು: ಕೋಲಾರ ಬೆಳೆಗಾರರು ಕಂಗಾಲು

Published : 15 ಆಗಸ್ಟ್ 2024, 15:27 IST
Last Updated : 15 ಆಗಸ್ಟ್ 2024, 15:27 IST
ಫಾಲೋ ಮಾಡಿ
Comments

ಬೆಂಗಳೂರು: ಬಾಂಗ್ಲಾದೇಶದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರ ಮೇಲೂ ಪರಿಣಾಮ ಬೀರಿದೆ.

ಬಾಂಗ್ಲಾ ಬಿಕ್ಕಟ್ಟಿಗೂ ಮೊದಲು ಕೋಲಾರದ ಎಪಿಎಂಸಿಯಲ್ಲಿ 15 ಕೆ.ಜಿ ತೂಕದ ಒಂದು ಬಾಕ್ಸ್ ಟೊಮೆಟೊ ದರವು ₹1,100ರಿಂದ ₹1,200 ಇತ್ತು. ಸದ್ಯ ₹350ರಿಂದ ₹480ಕ್ಕೆ ಇಳಿದಿದೆ. ಕಳೆದ 15 ದಿನಗಳ ಹಿಂದೆ ಪ್ರತಿ ಕೆ.ಜಿಗೆ ₹40 ಇದ್ದ ಚಿಲ್ಲರೆ ಟೊಮೆಟೊ ಧಾರಣೆಯು ಸದ್ಯ ₹12ಕ್ಕೆ ಇಳಿಕೆಯಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. 

ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊ ನೇರವಾಗಿ ಬಾಂಗ್ಲಾಕ್ಕೆ ರಫ್ತು ಆಗುವುದಿಲ್ಲ. ಜಿಲ್ಲೆಯಿಂದ ಪಶ್ಚಿಮ ಬಂಗಾಳದ ಮಾರುಕಟ್ಟೆಗೆ ಯಥೇಚ್ಛ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಅಲ್ಲಿಂದ ಬಾಂಗ್ಲಾದ ವಿವಿಧ ಮಾರುಕಟ್ಟೆಗಳಿಗೆ ರವಾನೆಯಾಗುತ್ತದೆ. ಸದ್ಯ ಅಲ್ಲಿ ಅಶಾಂತಿ ತಲೆದೋರಿರುವುದರಿಂದ ಮಾರಾಟದಲ್ಲಿ ಅರ್ಧದಷ್ಟು ಕುಸಿತವಾಗಿದೆ.

‘ಕಳೆದ ಹದಿನೈದು ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಪೂರೈಕೆಯಾಗುತ್ತಿದ್ದ ಟೊಮೆಟೊದಲ್ಲಿ ಶೇ 50ರಷ್ಟು ಕಡಿಮೆಯಾಗಿದೆ’ ಎಂದು ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಕಿರಣ್‌ ನಾರಾಯಣಸ್ವಾಮಿ ತಿಳಿಸಿದ್ದಾರೆ.

‘ಈ ಮೊದಲು ಪ್ರತಿದಿನ ಉತ್ತಮ ಗುಣಮಟ್ಟದ 40ರಿಂದ 50 ಲಾರಿ ಲೋಡ್‌ನಷ್ಟು ಟೊಮೆಟೊವನ್ನು ಪಶ್ಚಿಮ ಬಂಗಾಳಕ್ಕೆ ರವಾನಿಸಲಾಗುತ್ತಿತ್ತು. ಸದ್ಯ 20 ಲೋಡ್‌ನಷ್ಟು ಟೊಮೆಟೊ ಪೂರೈಕೆಯಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

ಕೋಲಾರ ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಇಲ್ಲಿಂದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಕ್ಕೆ ಪೂರೈಕೆಯಾಗುತ್ತದೆ. 

‘ಭಾರತದ ಗಡಿಗಳ ಮೂಲಕ ಟೊಮೆಟೊ ತುಂಬಿದ ಲಾರಿಗಳನ್ನು ಬಾಂಗ್ಲಾಕ್ಕೆ ಪ್ರವೇಶಿಸಲು ನಿರ್ಬಂಧಿಸಲಾಗಿದೆ. ಅಲ್ಲದೆ, ಪಶ್ಚಿಮ ಬಂಗಾಳದ ಲಾರಿ ಮಾಲೀಕರು ಬಾಂಗ್ಲಾಕ್ಕೆ ಹೋಗಲು ಪೂರೈಸಲು ಭಯಪಡುತ್ತಿದ್ದಾರೆ. ಹಾಗಾಗಿ, ಸ್ಥಳೀಯ ಮಾರುಕಟ್ಟೆಗಳಿಗಷ್ಟೇ ಪೂರೈಸುತ್ತಿದ್ದೇವೆ’ ಎಂದು ವರ್ತಕ ಶರ್ತಾಜ್ ಖಾನ್ ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT